Advertisement

ಯುವಕರಿಗೆ ವಿವೇಕವಾಣಿ ಸಹಾಯಕ: ಮಹೂರಕರ್‌

11:05 AM Jan 13, 2018 | Team Udayavani |

ಕಲಬುರಗಿ: ಇಲ್ಲಿನ ವಿವೇಕಾನಂದ ಇನ್‌ಸ್ಟೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಅಂಗವಾಗಿ ಶುಕ್ರವಾರ ನಗರದಲ್ಲಿ ಬೃಹತ್‌ ಮೆರವಣಿಗೆ ಮಾಡಿ ಯುವಕರಲ್ಲಿ ಜಾಗೃತಿ ಮೂಡಿಸಲಾಯಿತು.

Advertisement

ಇದಕ್ಕೂ ಮುನ್ನ ಕಾಲೇಜಿನಲ್ಲಿ ಮೆರವಣಿಗೆ ರಥಕ್ಕೆ ಪೂಜೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದ ಕೇಂದ್ರದ ಮುಖ್ಯಸ್ಥ ಎಸ್‌.ವಿ.ಮಹೂರಕರ್‌ ಚಾಲನೆ ನೀಡಿ, ಜಗತ್ತಿಗೆ ತನ್ನ ಸಂದೇಶಗಳ ಮೂಲಕ ವಿವೇಕವನ್ನು ಸಾರಿದ ಸ್ವಾಮಿ ವಿವೇಕಾನಂದರ ವಾಣಿ ಭಾರತದ ಯುವಕರಿಗೆ ತುಂಬಾ ಅವಶ್ಯಕವಾಗಿದೆ. ಇಂದಿನ ಯುವಕರು ಹಲವಾರು ಒತ್ತಡಗಳಲ್ಲಿ ಇದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನಕ್ಕಾಗಿ ವಿವೇಕವಾಣಿ ಸಹಾಯಕವಾಗಲಿದೆ ಎಂದರು.

ಬಳಿಕ ಮೆರವಣಿಗೆ ನಗರದ ನಗರೇಶ್ವರ ಶಾಲೆಯಿದ ಹಾದು ಕಿರಾಣಾ ಬಜಾರ್‌, ಕಪಡಾ ಬಜಾರ್‌, ಸರಾಫ್‌ ಬಜಾರ್‌, ಜಗತ್‌ವೃತ್ತ, ಸರದಾರ ವಲ್ಲಭಬಾಯಿ ವೃತ್ತದ ಮೂಲಕ ಹಾದು ಆನಂದ ಹೋಟೆಲ್‌ ವೃತ್ತದ ಬಳಿ ಇರುವ ಕಾಲೇಜಿಗೆ ತಲುಪಿತು. ಮೆರವಣಿಗೆಯಲ್ಲಿ ಕಾಲೇಜಿನ 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಪ್ರವೀಣ ನಾಯಕ, ಬಿಸಿಎ ವಿಭಾಗದ ಮುಖ್ಯಸ್ಥ ಅಜಯಕುಮಾರ ಶೆಟ್ಟಿ, ರತಿ ಶ್ರೀರಂಗ ಮಹಾಗಾಂವಕರ್‌, ಸುದರ್ಶನ ಸ್ವಾಮಿ, ಬಸಯ್ಯ ಸ್ವಾಮಿ, ಸಿದ್ದರಾಮಯ್ಯ ಹಿರೇಮಠ, ಸಿದ್ರಾಮ ಹವಾನಿ, ರಾಜಶೇಖರ ವಾಡಿ, ಅಶೋಕ ಕಾಂತಿಕಾರ, ಎಸ್‌.ಜಿ.ಘಂಟಿ, ಸ್ನೇಹಲ್‌ ಬೋರಾನ್‌ ಕರ್‌, ಅಂಬಿಕಾ ನೂಲಾ, ಕವಿತಾ ಸಂಗೊಳಗಿ, ಪಾರ್ವತಿ ಹಬೀಬ್‌ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next