ನವದೆಹಲಿ : ಐಟಿ ಸಂಸ್ಥೆ ವಿಪ್ರೋದ 3ನೇ ತ್ತೈಮಾಸಿಕದ ಸಾಧನೆ ವಿವರ ಪ್ರಕಟಗೊಂಡಿದೆ. ವರದಿಗಳ ಪ್ರಕಾರ ಸಂಸ್ಥೆಯ ನಿವ್ವಳ ಆದಾಯ ಶೇ.3ರಷ್ಟು ಏರಿಕೆಯೊಂದಿಗೆ 3.052.9 ಕೋಟಿ ರೂ.ಗಳಿಗೆ ತಲುಪಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ವಿಪ್ರೋದ ನಿವ್ವಳ ಆದಾಯ 2,969 ಕೋಟಿ ರೂ.ಗಳಾಗಿತ್ತು.
Advertisement
ಸಂಸ್ಥೆಯ ಆದಾಯವು ನಿರೀಕ್ಷೆಗಿಂತ ಹೆಚ್ಚಾಗಿದ್ದು, 3ನೇ ತ್ತೈಮಾಸಿಕದಲ್ಲಿ ಆದಾಯ 23,180 ಕೋಟಿ ರೂ.ಗಳಿಗೆ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿಪ್ರೋ ನಿರೀಕ್ಷೆಗಳನ್ನು ಮೀರಿ 23,229 ಕೋಟಿ ರೂ. ಆದಾಯವನ್ನು ಗಳಿಸಿದೆ. ಕಳೆದ ವರ್ಷದ ಮೂರನೇ ತ್ತೈಮಾಸಿಕದ ಆದಾಯಕ್ಕೆ ಹೋಲಿಸಿದರೆ ಇದು ಶೇ. 14.35 ರಷ್ಟು ಬೆಳವಣಿಗೆಯನ್ನು ದಾಖಲಿಸಿದಂತಾಗಿದೆ.