Advertisement
ವ್ಯಾಪಾರ ವಹಿವಾಟುಗಳು, ಉತ್ಪಾದನೆಗಳು ಕುಂಟಿತಗೊಂಡಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ವರಪ್ರೋ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ವೇತನವನ್ನು ನೀಡಲು ಮುಂದಾಗಿದೆ.
Related Articles
Advertisement
ಇನ್ನು, “ಸಹಾಯಕ ವ್ಯವಸ್ಥಾಪಕ ಹಾಗೂ ಅದಕ್ಕಿಂತ ಕಿರಿಯ ಹುದ್ದೆಗಳಲ್ಲಿ ಇರುವವರಿಗೆ ಮೆರಿಟ್ ಆಧಾರದಲ್ಲಿ ಹೆಚ್ಚುವರಿ ವೇತನವನ್ನು ನೀಡಲು ಸಂಸ್ಥೆ ಮುಯಂದಾಗಿದ್ದು, ಗ್ರಾಹಕರ ಪಾಲಿಗಿದು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸೌಭಾಗ್ಯವೇ ಸರಿ.
ಈ ಕಿರಿಯ ಹುದ್ದೆಗಳಲ್ಲಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಹರಿಗೆ ಜನವರಿಯಲ್ಲಿಯೂ ಕೂಡ ಸಂಸ್ಥೆ ಹೆಚ್ಚುವರಿ ವೇತನವನ್ನು ನೀಡಿತ್ತು. ಈಗ ಮತ್ತೆ ಒಂದೇ ವರ್ಷದಲ್ಲಿ ತನ್ನ ಕಿರಿಯ ಉದ್ಯೋಗಿಗಳಿಗೆ ವೇತನವನ್ನು ಹೆಚ್ಚು ಮಾಡಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿರುವ ಈ ಹೆಚ್ಚುವರಿ ವೇತನ ಈ ಕ್ಯಾಲೆಂಡರ್ ವರ್ಷದಲ್ಲಿನ ಎರಡನೆಯ ವೇತನ ಹೆಚ್ಚಳಎಂದು ಸಂಸ್ಥೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಅರುಣ್ ಸಿಂಗ್ ಸೂಚನೆ: ಅಶೋಕ್