ನಾಗ್ಪುರ: ಮಹಾರಾಷ್ಟ್ರ ವಿಧಾನಸಭಾ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ) ಚಳಿಗಾಲದ ಅಧಿವೇಶನವನ್ನು ನಾಗ್ಪುರದ ಬದಲಾಗಿ ಮುಂಬೈನಲ್ಲಿ ನಡೆಸಲು ತೀರ್ಮಾನಿಸಿದೆ.
ನಾಗ್ಪುರದಲ್ಲಿ ಕೊರೊನಾ ಸೋಂಕು ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ವಿದರ್ಭ ಭಾಗದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವಾರಾಂತ್ಯದಲ್ಲಿ ನಗರದಲ್ಲಿ ಕೋವಿಡ್ ತೀವ್ರವಾಗಿ ಅಪ್ಪಳಿಸಿದೆ. ಸದ್ಯದಲ್ಲೇ ದೀಪಾವಳಿ ಸನಿಹವಿದ್ದು, ಸಾರ್ವಜನಿಕರ ಓಡಾಟ ಹೆಚ್ಚಳದಿಂದಾಗಿ ಸೋಂಕು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೋಟ್ಯಂತರ ರೂಪಾಯಿ ಸುರಿದು, ಅಧಿವೇಶನ ಮಾಡಿ, ಶಾಸಕರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲಾಗದು’ ಎಂದು ನಾನಾ ಪಟೋಳೆ ಹೇಳಿದ್ದಾರೆ.
ಇದನ್ನೂ ಓದಿ:ಶಿರಾ ಗೆಲುವಿಗೆ ತಾವೊಬ್ಬರೇ ಕಾರಣ ಎಂದು ವಿಜಯೇಂದ್ರ ಎಲ್ಲೂ ಹೇಳಲಿಲ್ಲ: ಸಿ.ಟಿ.ರವಿ
ಫೆಬ್ರವರಿಯ ಬಜೆಟ್ ಅಧಿವೇಶನವನ್ನಾದರೂ ನಾಗ್ಪುರದಲ್ಲಿ ಆಯೋಜಿಸಬೇಕು ಎಂದು ವಿದರ್ಭ ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.