Advertisement

Winter Session: ಉತ್ತರ ಚರ್ಚೆಯಲ್ಲಿ ಇಲ್ಲಗಳದೇ ಸದ್ದು !

11:46 PM Dec 17, 2024 | Team Udayavani |

ಬೆಳಗಾವಿ: ಶಾಲೆಗಳಲ್ಲಿ ಶಿಕ್ಷಕರು, ಆಸ್ಪತ್ರೆಗಳು ವೈದ್ಯರು ಇಲ್ಲದೆ ಉತ್ತರ ಕರ್ನಾಟಕ ಭಾಗವು ಅಭಿವೃದ್ಧಿಯಲ್ಲಿ ಹಿನ್ನಡೆ ಅನು ಭವಿಸುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಾಲಮಿತಿಯಲ್ಲಿ ನೀರಾವರಿ ಯೋಜನೆಗಳು ಪೂರ್ಣ ಗೊಳ್ಳುತ್ತಿಲ್ಲ, ಭೂಮಿ ಸವಳಾಗುತ್ತಿದೆ.

Advertisement

ಉದ್ದಿಮೆಗಳು ಬಂದು ಉದ್ಯೋಗ ಸೃಷ್ಟಿ ಯಾಗುತ್ತಿಲ್ಲ ಎಂದು ಉತ್ತರ ಕರ್ನಾಟಕದ ಶಾಸಕರು ತಮ್ಮಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆದರು.

ಸೋಮವಾರದಿಂದ ವಿಧಾನ ಸಭೆಯಲ್ಲಿ ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಯು
ಮಂಗಳವಾರವೂ ಮುಂದುವರಿಯಿತು. ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆಯಿದೆ.

ಖಾಯಂ ಶಿಕ್ಷಕರಿದ್ದರೆ ಮಾತ್ರ ನಾವು ಅವರಿಂದ ಉತ್ತರದಾಯಿತ್ವ ನಿರೀಕ್ಷೆ ಮಾಡಬಹುದು. ಅತಿಥಿ ಶಿಕ್ಷಕರಿಂದ ಉತ್ತರದಾಯಿತ್ವ ನಿರೀಕ್ಷಿಸಲು ಸಾಧ್ಯವಿಲ್ಲ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ನಿರಾಶಾದಾಯಕ ಪ್ರದರ್ಶನಕ್ಕೆ ಶಿಕ್ಷಕರ ಕೊರತೆಯೂ ಪ್ರಮುಖ ಕಾರಣವಾಗಿದೆ. ಆದ್ದರಿಂದ ಶೀಘ್ರವೇ ಶಿಕ್ಷಕರ ನೇಮಕಾತಿಯನ್ನು ನಡೆಸುವಂತೆ ಶಾಸಕರು ಆಗ್ರಹಿಸಿದರು.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಬೆಳಗಾವಿ ಅಧಿವೇಶನವನ್ನು 3 ವಾರಗಳ ಕಾಲ ನಡೆಸಬೇಕು ಮತ್ತು ಇದರಲ್ಲಿ ಒಂದು ವಾರ ಉ. ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೀಸಲಿಡಬೇಕು.
– ಬಿ.ವೈ. ವಿಜಯೇಂದ್ರ, ಶಾಸಕ

Advertisement

ಧರಣಿ ವೇಳೆ ಅಸ್ವಸ್ಥರಾದ ಅತಿಥಿ
ಉಪನ್ಯಾಸಕಿಗೆ ಡಾ| ಸರ್ಜಿ ಚಿಕಿತ್ಸೆ
ಬೆಳಗಾವಿ: ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಧರಣಿ ನಡೆಸುತ್ತಿದ್ದ ವೇಳೆ ಅಸ್ವಸ್ಥಗೊಂಡ ಉಪನ್ಯಾಸಕಿಗೆ ವಿಧಾನ ಪರಿಷತ್‌ ಸದಸ್ಯ ಡಾ| ಧನಂಜಯ ಸರ್ಜಿ ಖುದ್ದು ಪ್ರಥಮ ಚಿಕಿತ್ಸೆ ನೀಡಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು.

ಮಂಗಳವಾರ ಸುವರ್ಣ ವಿಧಾನಸೌಧದ ಮುಂಭಾಗ ಸರಕಾರಿ ಪ.ಪೂ. ಕಾಲೇಜುಗಳ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದರು. ಸ್ಥಳಕ್ಕೆ ಡಾ| ಧನಂಜಯ ಸರ್ಜಿ ಭೇಟಿ ನಿಡಿ ಮನವಿ ಸ್ವೀಕರಿಸಿದರು. ಆಗ ಉಪನ್ಯಾಸಕಿಯೊಬ್ಬರು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದು, ತತ್‌ಕ್ಷಣ ಡಾ| ಸರ್ಜಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next