Advertisement

Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ

12:58 AM Dec 12, 2024 | Team Udayavani |

ಕುಂದಾಪುರ: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು. ಮೀನುಗಾರಿಕೆ ಕ್ಷೇತ್ರ ವನ್ನು ಅಭಿವೃದ್ಧಿಪಡಿಸಲು ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿ, ಉತ್ಪಾದಕತೆ ಹಾಗೂ ಮೂಲಸೌಕರ್ಯ ಸುಧಾರಣೆ ಯೊಂದಿಗೆ ಆದಾಯ ದ್ವಿಗುಣ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶು ವೈದ್ಯಕೀಯ ಮತ್ತು ಹೈನುಗಾರಿಕೆ ಸಚಿವರಿಗೆ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.

Advertisement

ಇದಕ್ಕೆ ಸಚಿವರು, ರಾಜ್ಯಕ್ಕೆ 2020- 21ರಿಂದ 2024-25ನೇ ಸಾಲಿನ ವರೆಗೆ ಒಟ್ಟು 1,056.34 ಕೋರೂ. ಅನುದಾನ ಒದಗಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಯೋಜನೆ ಯಡಿ ಈವರೆಗೆ 17.43 ಕೋ.ರೂ. ಸಹಾಯಧನ ವಿನಿಯೋಗಿಸಲಾಗಿದೆ.

ಮೀನು ಕೃಷಿಕೊಳ, ಸುಧಾರಿತ ಮೀನು ಉತ್ಪಾದನೆ ಘಟಕ ಶೀತಲೀಕರಣ, ಮಂಜುಗಡ್ಡೆ ಕಾರ್ಖಾನೆನಿರ್ಮಾಣ, ಮಂಜುಗಡ್ಡೆ ಘಟಕಗಳ ಆಧುನೀ ಕರಣ,ಮೃದ್ವಂಗಿಗಳ/ಕಪ್ಪೆ ಚಿಪ್ಪು ಸಾಕಾಣಿಕೆಗಾಗಿ ಸಹಾಯ, ಮೀನು ಮಾರಾಟ ಮತ್ತು ಸಾಗಣೆಗೆ ತ್ರಿಚಕ್ರ ಹಾಗೂ ಇನ್ಸುಲೇಟೆಡ್‌ ವಾಹನಗಳ ಖರೀದಿಗಾಗಿ ಸಹಾಯಧನ-ವಿವಿಧ ಯೋಜನೆಗಳಿಗಾಗಿ ಇದುವರೆಗೆ ಜಿಲ್ಲೆಯಲ್ಲಿ 28,616 ಮಂದಿ ಸಹಾಯ ಧನ ಪಡೆದಿದ್ದಾರೆ ಎಂದು ಸಚಿವರು ತಿಳಿಸಿರುವುದಾಗಿ ಸಂಸದರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next