Advertisement
ವಾಸ್ತವವಾಗಿ ಋತುಮಾನಕ್ಕೆ ತಕ್ಕಂತೆ ಡಯೆಟ್ ಯೋಜನೆಯಿದ್ದರೆ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಸುಲಭ. ಋತುವಿಗೆ ಸೂಕ್ತವಾದ ತರಕಾರಿಗಳನ್ನು ಬಳಸುವುದರಿಂದ ದೇಹದ ತೂಕವನ್ನು ಕಡಿಮೆಗೊಳಿಸಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಋತುಮಾನದ ತರಕಾರಿಗಳನ್ನು ಸಾಕಷ್ಟು ಸೇವಿಸುವುದರೊಂದಿಗೆ ಚಳಿಗಾಲದಲ್ಲಿ ಶೇಖರಣೆಯಾದ ಕೊಬ್ಬಿನಾಂಶಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ.
ಹೂಕೋಸು ತರಕಾರಿಯ ಸೋದರ ಸಂಬಂಧಿಯಂತಿರುವ ಬ್ರೊಕ್‌ಲಿಯು ಹೆಚ್ಚಿನ ಫೈಬರ್ ಅಂಶವುಳ್ಳ ತರಕಾರಿ. ಈ ತರಕಾರಿ ದೀರ್ಘಕಾಲಿನ ಪ್ರಯೋಜನವನ್ನು ಹೊಂದಿದೆ. ಬ್ರೊಕ್‌ಲಿಯಲ್ಲಿ ಕಡಿಮೆ ಕ್ಯಾಲೋರಿ ಇರುವುದು ಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳಿವೆ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ಪ್ರೊಟೀನ್ ಅಂಶವಿರುವುದರಿಂದ ಡಯೆಟ್ ಆಹಾರದಲ್ಲಿ ಇದರ ಬಳಕೆ ಪ್ರಯೋಜನಕಾರಿ. ಬ್ರೊಕ್‌ಲಿ ಸೇವನೆಯೂ ಕೆಲವೊಂದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಗುಣವಿದೆ. ·ಕಾಲೆ
ಕಾಲೆಯಲ್ಲಿ ಕಡಿಮೆ ಕ್ಯಾಲೋರಿಗಳಿದ್ದರೂ ದೇಹಕ್ಕೆ ಬೇಕಾದ ವಿಟಮಿನ್ ಎ, ಬಿ6 ಹಾಗೂ ಸಿ, ಫೈಬರ್, ಪೊಟ್ಯಾಷಿಯಂನಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ತರಕಾರಿ ಚಳಿಗಾಲದ ಋತುವಿನಲ್ಲಿ ಉತ್ತಮವಾಗಿ ಬೆಳೆಯುವುದರಿಂದ ಕಾಲೆಯಲ್ಲಿ ಐಸೋಥಿಯೋಸೈನಾಟ್‌ಗಳಲ್ಲಿ ಹೆಚ್ಚಿರುವುದರಿಂದ ಇದು ದೇಹದಲ್ಲಿರುವ ನಿರ್ವಿಶೀಕರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಲೆ ದೇಹದ ತೂಕ ಇಳಿಸುವಿಕೆಗೆ ಆರೋಗ್ಯಕರ ಹಾಗೂ ನ್ಯೂಟ್ರಿಷಿಯನ್‌ಗಳನ್ನು ತುಂಬಿರುವ ತರಕಾರಿಯಾಗಿದೆ.
Related Articles
ನಿಯಮಿತ ಸಮತೋಲಿತ ಆಹಾರದ ಭಾಗವಾಗಿ ಬ್ರಸಲ್ಸ್ ಮೊಗ್ಗುಗಳನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಇಳಿಸಬಹುದು. ಬ್ರಸಲ್ಸ್ ಮೊಗ್ಗುಗಳಲ್ಲಿ ಹೆಚ್ಚಿನ ನೀರಿನಾಂಶ ಹಾಗೂ ಫೈಬರ್ ಅಂಶವಿರುವುದರಿಂದ ಡಯೆಟ್ ಆಹಾರದಲ್ಲಿ ಫೈಬರ್ ಅಂಶವುಳ್ಳ ಬೇರೆ ಪದಾರ್ಥಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಈ ತರಕಾರಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳಿದ್ದು, ವಿಟಮಿನ್ ಸಿ ಅನ್ನು ಹೇರಳವಾಗಿ ಹೊಂದಿದೆ. ಇದು ಮಿತವಾದ ದೈಹಿಕ ಚಟುವಟಿಕೆಯಲ್ಲಿ ದೇಹದ ಕೊಬ್ಬನ್ನು ಇಳಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
Advertisement
·ಕುಂಬಳಕಾಯಿತೂಕ ಇಳಿಸಲು ಪ್ರಯತ್ನ ಪಡುವವರಿಗೆ ಕುಂಬಳಕಾಯಿ ಜಾತಿಗೆ ಸೇರುವ ತರಕಾರಿಗಳು ಉತ್ತಮವಾದದು. ಇದು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುವ ಕಡಿಮೆ ಕ್ಯಾಲೋರಿ ಇರುವ ತರಕಾರಿಗಳಾಗಿವೆ. ಫೈಬರ್ ಪ್ರಮಾಣ ಹೆಚ್ಚಾಗಿರುವುದರಿಂದ ಈ ತರಕಾರಿ ಒಟ್ಟು ಕ್ಯಾಲೋರಿ ಸೇವನೆಯನ್ನು ಕಡಿಮೆಗೊಳಿಸುತ್ತದೆ. ಕ್ವಾಲಿಫ್ಲವರ್
ಶೇ.25ರಷ್ಟು ಕ್ಯಾಲೋರಿಯಿರುವ ಒಂದು ಕಪ್ ಕ್ವಾಲಿಫ್ಲವರ್‌ನಲ್ಲಿ ಫೈಬರ್ ಒಳಗೊಂಡಂತೆ ತೂಕ ಇಳಿಸುವಿಕೆಗೆ ನೆರವಾಗುವ ಪ್ರಮುಖ ಮಿಟಮಿನ್‌ಗಳು, ಖನಿಜಾಂಶಗಳು ಹಾಗೂ ಪೋಷಕಾಂಶಗಳಿವೆ. ಆರೋಗ್ಯಕರ ತರಕಾರಿಯಾಗಿರುವುದರಿಂದ ಡಯೆಟ್‌ನಲ್ಲಿ ಕ್ವಾಲಿಫ್ಲವರ್ ಸೇವನೆ ಉತ್ತಮವಾದದು. •ರಮ್ಯಾ ಕೆದಿಲಾಯ