Advertisement
ಪುಟ್ಟ ಬಟಾಟೆ ಮಸಾಲಾ ಕರಿಬೇಕಾಗುವ ಸಾಮಗ್ರಿ: ಚಿಕ್ಕ ಆಲೂಗಡ್ಡೆ 6-7, ಹುರಿದ ಒಣಮೆಣಸಿನಕಾಯಿ 4-5, (ಬ್ಯಾಡಗಿ+ಊರ ಮೆಣಸು), ತೆಂಗಿನತುರಿ- 1 ಕಪ್, ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಒಗ್ಗರಣೆ ಸೊಪ್ಪು- 1 ಗರಿಕೆ, ಉದ್ದಿನಬೇಳೆ- 2 ಚಮಚ, ಕೊತ್ತಂಬರಿ ಬೀಜ- 1 ಚಮಚ, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ.
ಬೇಕಾಗುವ ಸಾಮಗ್ರಿ: ಕಿತ್ತಳೆ ಸಿಪ್ಪೆ- 1 ಕಪ್, ತೆಂಗಿನತುರಿ- 1/2 ಕಪ್, ಹುರಿದ ಒಣಮೆಣಸಿನಕಾಯಿ- 2, ಕೊತ್ತಂಬರಿ ಬೀಜ- 1 ಚಮಚ, ಜೀರಿಗೆ- 1 ಚಮಚ, ಬೆಲ್ಲ – ಗೋಲಿ ಗಾತ್ರ, ಹುಣಸೆಹಣ್ಣು ಸ್ವಲ್ಪ , ಎಣ್ಣೆ-ತುಪ್ಪ 1 ಚಮಚ, ರುಚಿಗೆ ಉಪ್ಪು.
Related Articles
Advertisement
ಆಲೂಗಡ್ಡೆ ಮೊಸರು ಗೊಜ್ಜುಬೇಕಾಗುವ ಸಾಮಗ್ರಿ: ಆಲೂಗಡ್ಡೆ- 2, ಮೊಸರು- 1 ಬಟ್ಟಲು, ಮೆಣಸಿನಕಾಯಿ- 1, ರುಚಿಗೆ ಉಪ್ಪು , ಒಗ್ಗರಣೆಗೆ ಸಾಸಿವೆ, ಕರಿಬೇವಿನ ಸೊಪ್ಪು , ಜೀರಿಗೆ, ಎಣ್ಣೆ- 1 ಚಮಚ. ತಯಾರಿಸುವ ವಿಧಾನ: ಆಲೂಗಡ್ಡೆ ಬೇಯಿಸಿ ಸಿಪ್ಪೆ ಸುಲಿದು ಮಿಕ್ಸಿಜಾರಿಗೆ ಹಾಕಿ ಮೆಣಸಿನಕಾಯಿ, ಉಪ್ಪು ಹಾಕಿ ನಯವಾಗಿ ರುಬ್ಬಿ. (ತರಿ ತರಿಯಾಗಿಯೂ ರುಬ್ಬಬಹುದು) ಮೊಸರು ಬೆರೆಸಿ ಸಾಸಿವೆ, ಕರಿಬೇವು, ಜೀರಿಗೆ ಒಗ್ಗರಣೆ ಕೊಡಿ. ಕೆಸುವಿನ ಗೆಡ್ಡೆ ಹುಮ್ಮಣ
ಬೇಕಾಗುವ ಸಾಮಗ್ರಿ: ಕೆಸುವಿನ ಗೆಡ್ಡೆ 2-3, ಹುರಿದ ಒಣಮೆಣಸಿನಕಾಯಿ 3-4, ಹುಣಸೆಹಣ್ಣು- ಗೋಲಿ ಗಾತ್ರ, ರುಚಿಗೆ ಉಪ್ಪು , ಇಂಗಿನ ನೀರು- 1 ಚಮಚ, ತೆಂಗಿನತುರಿ- 1 ಕಪ್. ತಯಾರಿಸುವ ವಿಧಾನ: ಕೆಸುವಿನ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಎರಡು ಇಂಚಿನ ಚೌಕ ತುಂಡು ಮಾಡಿಡಿ. ತೆಂಗಿನ ತುರಿ, ಒಣಮೆಣಸಿನ ಕಾಯಿ, ಹುಣಸೆಹಣ್ಣು ಹಾಕಿ ನಯವಾಗಿ ರುಬ್ಬಿ ಕೆಸುವಿನ ಗಡ್ಡೆಗೆ ಹಾಕಿ ಉಪ್ಪು, ಸ್ವಲ್ಪ ನೀರು, ಇಂಗಿನ ನೀರು ಹಾಕಿ ಕುದಿಸಿ ಮುಚ್ಚಿಡಿ. ಚಳಿಗಾಲಕ್ಕೆ ಆರೋಗ್ಯದಾಯಕ ಹುಮ್ಮಣ ಸವಿಯಿರಿ. ಎಸ್. ಜಯಶ್ರೀ ಶೆಣೈ