Advertisement
ಹುರುಳಿ ಸಾರು ಬೇಕಾಗುವ ಸಾಮಗ್ರಿ: ಹುರುಳಿ- 1/2 ಕೆಜಿ, ಈರುಳ್ಳಿ-2, ಹಸಿಮೆಣಸು- 2, ಹುಣಸೆಹುಳಿ- ಲಿಂಬೆಗಾತ್ರ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ: ಎಣ್ಣೆ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಕರಿಬೇವು.
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್, ತೆಂಗಿನತುರಿ- 1/2 ಕಪ್, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು- 2 ಚಮಚ, ಜೀರಿಗೆಪುಡಿ- 1/2 ಚಮಚ, ಕಾಳುಮೆಣಸಿನ ಪುಡಿ- 1/4 ಚಮಚ, ರುಚಿಗೆ ಬೇಕಷ್ಟು ಉಪ್ಪು , ಚಿಟಿಕೆ ಅರಸಿನ, ಒಗ್ಗರಣೆಗೆ: ಉದ್ದಿನಬೇಳೆ, ಸಾಸಿವೆ, ಕರಿಬೇವು, ಇಂಗು.
Related Articles
Advertisement
ಕರಿಮೆಣಸು-ಜೀರಿಗೆ ರಸಂಬೇಕಾಗುವ ಸಾಮಗ್ರಿ: ತೊಗರಿಬೇಳೆ- 1 ಕಪ್, ಕರಿಮೆಣಸು- 1 ಚಮಚ, ಜೀರಿಗೆ- 1 ಚಮಚ, ಹುಣಸೆ- 1/2 ಲಿಂಬೆಗಾತ್ರದಷ್ಟು , ಬೆಳ್ಳುಳ್ಳಿ- 1 ಸಣ್ಣ ಗೆಡ್ಡೆ , ಬೆಲ್ಲ ರುಚಿಗೆ, ಅರಸಿನ ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು , ಒಗ್ಗರಣೆಗೆ: ಸಾಸಿವೆ, ಒಣಮೆಣಸು, ಕರಿಬೇವು, ಎಣ್ಣೆ. ತಯಾರಿಸುವ ವಿಧಾನ: ಬೇಳೆಯನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಕರಿಬೇವು, ಬೆಳ್ಳುಳ್ಳಿ, ಜೀರಿಗೆ ಮತ್ತು ಕರಿಮೆಣಸು ಹಾಕಿಕೊಂಡು ತರಿ ತರಿಯಾಗಿ ಪುಡಿ ಮಾಡಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ಪುಡಿಮಾಡಿಕೊಂಡ ಮಸಾಲೆ ಪುಡಿಯನ್ನು ಸೇರಿಸಿ ಇಂಗು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಬೇಯಿಸಿದ ಬೇಳೆಯನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಅರಸಿನ, ಬೆಲ್ಲ, ಹುಳಿನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ಗರಂ ಗರಂ ರಸಂ ತಯಾರು. ಜ್ವರ, ನೆಗಡಿ, ಕೆಮ್ಮು ಇದ್ದಾಗ ಊಟಕ್ಕೆ ರುಚಿಕರವಾಗಿರುತ್ತದೆ. ಹಪ್ಪಳ ಸಲಾಡ್
ಬೇಕಾಗುವ ಸಾಮಗ್ರಿ: ಹಪ್ಪಳ- 4, ನೀರುಳ್ಳಿ- 1 ಕಪ್, ಟೊಮೆಟೊ ಚೂರುಗಳು- 1/2 ಕಪ್, ಸೌತೆಕಾಯಿ- 1/2 ಕಪ್, ಕೊತ್ತಂಬರಿ ಸೊಪ್ಪು- 2 ಚಮಚ, ಹಸಿಮೆಣಸು- 1, ಲಿಂಬೆರಸ- 1/2 ಚಮಚ, ಕಾಳುಮೆಣಸಿನ ಪುಡಿ- 1/4 ಚಮಚ, ಜೀರಿಗೆಪುಡಿ- 1/4 ಚಮಚ, ಮೆಣಸಿನ ಹುಡಿ- 1/4 ಚಮಚ. ರುಚಿಗೆ ಉಪ್ಪು , ಎಣ್ಣೆ. ತಯಾರಿಸುವ ವಿಧಾನ: ಹಪ್ಪಳವನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹೆಚ್ಚಿಕೊಂಡು ಒಂದು ಬೌಲ್‌ಗೆ ಹಾಕಿ ಮಿಶ್ರ ಮಾಡಿರಿ. ಎಣ್ಣೆಯಲ್ಲಿ ಒಂದು ಹಪ್ಪಳವನ್ನು ಹುರಿದು ಪುಡಿಮಾಡಿ ಈ ಮಿಶ್ರಣಕ್ಕೆ ಸೇರಿಸಿ. ನಂತರ ಉಳಿದ ಹಪ್ಪಳವನ್ನು ಕೆಂಪಗೆ ಹುರಿದು ಮಾಡಿಟ್ಟ ಮಿಶ್ರಣವನ್ನು ಹಪ್ಪಳ ಮೇಲೆ ಉದುರಿಸಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರ ಹಪ್ಪಳ ಸಲಾಡ್ ತಯಾರು. ಸ್ವಾತಿ