Advertisement

ಹಿರಿಯರ ಮನೆಯಲ್ಲಿ ಕರಾವಳಿಗರದ್ದೇ ಪಾರಮ್ಯ

06:00 AM Dec 13, 2018 | |

ಬೆಂಗಳೂರು: ಹಿರಿಯರ ಮನೆ ಎಂದೇ ಕರೆಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಈಗ ಕರಾವಳಿಗರದೇ ಪಾರಮ್ಯ.ಇದು ಕರಾವಳಿಗರ ಹೆಮ್ಮೆಯೂ ಹೌದು. ಒಂದೇ ಅವಧಿಯಲ್ಲಿ ಸಭಾಪತಿ, ಸಭಾ ನಾಯಕಿ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನವನ್ನು ಕರಾವಳಿಗರು ಅಲಂಕರಿಸಿದ್ದು ವಿಧಾನ ಪರಿಷತ್ತಿನ ಇತಿಹಾಸದಲ್ಲೇ ಮೊದಲು.

Advertisement

ಸಭಾಪತಿ ಸ್ಥಾನದಲ್ಲಿ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರಿದ್ದರೆ, ಪರಿಷತ್ತಿನ ಸಭಾನಾಯಕಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಹಾಗೂ ಪ್ರತಿಪಕ್ಷದ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಸೇವೆ ಸಲ್ಲಿಸುತ್ತಿದ್ದಾರೆ. ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಯವರಿಂದ ತೆರವಾದ ಸ್ಥಾನಕ್ಕೆ ಕುಂದಾಪುರ ತಾಲೂಕಿನ ಹುಯ್ನಾರು ಮನೆತನದ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅನಿರೀಕ್ಷಿತ ಆಯ್ಕೆಯಾಗಿದ್ದಾರೆ.

ಕರಾವಳಿಯ ಉಭಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಿಂದ ಈ ಭಾರಿ ವಿಧಾನಸಭೆಗೆ ಆಯ್ಕೆಯಾಗಿರುವುದು ಯು.ಟಿ.ಖಾದರ್‌ ಮಾತ್ರ. ಅವರೀಗ ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಶಾಸಕರ ವಶದಲ್ಲಿವೆ. ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರ ಆಯ್ಕೆ ಕರಾವಳಿ ಕಾಂಗ್ರೆಸ್‌ಗೂ ಶಕ್ತಿ ತುಂಬಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆ.ಎಸ್‌.ಈಶ್ವರಪ್ಪ ಅವರು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ವಿಧಾನ ಪರಿಷತ್ತಿನ ಪ್ರತಿಪಕ್ಷದ ಸ್ಥಾನ ಹಿರಿಯ ಶಾಸಕ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಲಭಿಸಿದೆ.

ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಧಾರ್ಮಿಕ ದತ್ತಿ ಇಲಾಖೆ ಸಹಿತವಾಗಿ ಎಲ್ಲ ವಿಷಯದ ಬಗ್ಗೆ ಅಗಾಧ ಜ್ಞಾನ ಮತ್ತು ಪ್ರಖರ ವಾಕ್ಚಾತುರ್ಯ ಹೊಂದಿದ್ದಾರೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಆರ್‌.ಸೀತಾರಾಂ ಅವರು ವಿಧಾನ ಪರಿಷತ್‌ನ ಸಭಾನಾಯಕರಾಗಿದ್ದರು. ಅವರ ಅವಧಿ ಮುಗಿದ ನಂತರ ಆ ಸ್ಥಾನ ಕೂಡ ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಡಾ.ಜಯಮಾಲಾ ಅವರ ಪಾಲಿಗೆ ಒದಗಿ ಬಂದಿದೆ. ಇವರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದು, ಸಚಿವೆಯಾಗಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಪರಿಷತ್ತಿನ ಮೂರು ಆಯಕಟ್ಟಿನ ಹುದ್ದೆಗಳು ಕರಾವಳಿಯ ಧುರೀಣರಿಗೆ ಲಭಿಸಿರುವುದು ವಿಶೇಷವಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ವಿಧಾನಪರಿಷತ್‌ ಮುಖ್ಯ ಸಚೇತಕರಾಗಿ ಐವನ್‌ ಡಿಸೋಜಾ ಹಾಗೂ ಪ್ರತಿಪಕ್ಷದ ಗಣೇಶ್‌ ಕಾರ್ಣಿಕ್‌ ಇದ್ದರು.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next