ಲಂಡನ್: ಕಳೆದ ವಾರಾಂತ್ಯ ಗೂಗಲ್‌ನಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಫೋಟೊ ಕೆಲಕಾಲ ಕಣ್ಮರೆಯಾಗಿತ್ತು.
ಜನರು ಗೂಗಲ್‌ನ ಸರ್ಚ್ ಎಂಜಿನ್‌ನಲ್ಲಿ ‘2ನೇ ವಿಶ್ವ ಮಹಾಯುದ್ಧದ ನಾಯಕರು’ ಕುರಿತು ಮಾಹಿತಿ ಹುಡುಕಿದಾಗ ಚರ್ಚಿಲ್ ಅವರ ಫೋಟೊ ಬದಲಿಗೆ ಖಾಲಿ ಪೆಟ್ಟಿಗೆ ಕಾಣಿಸಿಕೊಂಡಿತು.
ಈ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದರು. ಬಳಿಕ, ಕೆಲ ಸಮಯದ ನಂತರ ಮತ್ತೆ ಅವರ ಫೋಟೊ ಕಾಣಿಸಿತು.
ಜಗತ್ತಿನ ಹಲ ವೆಡೆ ಜನಾಂಗೀಯ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಗಳು ನಡೆಯುತ್ತಿವೆ. ಹಲವೆಡೆ ಜನಾಂಗೀಯ ಮತ್ತು ವಸಾಹತುಶಾಹಿ ನಾಯಕರ ಪ್ರತಿಮೆಗಳನ್ನು ಕಿತ್ತುಹಾಕಲಾಗುತ್ತಿದೆ.
ಲಂಡನ್‌ನಲ್ಲಿ ಕಳೆದ ವಾರ ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಗಳಿಗೆ ಮುಂಚಿತವಾಗಿ, ಚರ್ಚಿಲ್ ಸೇರಿದಂತೆ ಇತಿಹಾಸ ಪ್ರಸಿದ್ಧ ನಾಯಕರ ಪ್ರತಿಮೆಗಳಿಗೆ ರಕ್ಷಣೆ ಒದಗಿಸಲಾಗಿತ್ತು.