ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇದರ ವತಿಯಿಂದ ಇತ್ತೀಚೆಗೆ ಗೌರೀ ಗಣೇಶ ಸಭಾಭವನ ಕಂದೂರಿನಲ್ಲಿ ಯಕ್ಷ ಸಂಭ್ರಮ. ಒಂದೇ ದಿನ ಬೆಳಗ್ಗಿನಿಂದ ಸಂಜೆ ತನಕ ಮೂರು ತಾಳಮದ್ದಳೆಯ ಅರ್ಥಗಾರಿಕೆಯ ವೈಭವವನ್ನು ನೋಡುವ ಅವಕಾಶ. ಪ್ರಥಮವಾಗಿ ಅಯ್ದಕೊಂಡ ಪ್ರಸಂಗ ಅಂಗದ ಸಂಧಾನ. ಭಾಗವತರಾಗಿ ಪ್ರದೀಪ್ ಕುಮಾರ್ ಗಟ್ಟಿ ಕಂಬಳಪದವು, ಮದ್ದಳೆಯಲ್ಲಿ ರಾಮ ಮೂರ್ತಿ ಕುದ್ರೆಕೋಡ್ಲು, ಚೆಂಡೆಯಲ್ಲಿ ದಿವಾಣ ಶಂಕರ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮನಾಗಿ ಶೇಣಿ ವೇಣುಗೋಪಾಲ ಭಟ್, ಅಂಗದನಾಗಿ ದಿನೇಶ ಶೆಟ್ಟಿ ಕಾವಳ ಕಟ್ಟೆ, ಪ್ರಹಸ್ತನಾಗಿ ಜಬ್ಟಾರ್ ಸಮೋ ಮತ್ತು ರಾವಣನಾಗಿ ಪುಷ್ಪರಾಜ್ ಕುಕ್ಕಾಜೆ ಕಾಣಿಸಿಕೊಂಡು ವಾಕ್ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದರು.
ಮಧ್ಯಾಹನ ಆಯ್ದಕೊಂಡ ಪ್ರಸಂಗ ಇಂದ್ರಜಿತು ಕಾಳಗ. ಭಾಗವತರಾಗಿ ರಾಜಾ ಬರೆಮನೆ , ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಪಾರೆಕೋಡಿ ಗಣಪತಿ ಭಟ್ ಮತ್ತು ಆನೆಕಲ್ಲು ಪ್ರಸನ್ನ ಭಟ್ ಕಾಣಿಸಿಕೊಂಡರು. ಮದ್ದಳೆಯಲ್ಲಿ ರಾಮ ಹೊಳ್ಳ ಸುರತ್ಕಲ್ ಮತ್ತು ಚೆಂಡೆಯಲ್ಲಿ ವೇದವ್ಯಾಸ ಕತ್ತೆತ್ತೂರು ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಶ್ರೀರಾಮನಾಗಿ ಚಣಿಲ ಸುಬ್ರಹ್ಮಣ್ಯ ಭಟ್, ಇಂದ್ರಜಿತುವಾಗಿ ವಿನಯ ಆಚಾರ್ಯ ಮತ್ತು ದಿನೇಶ್ ಶೆಟ್ಟಿ ಅಳಿಕೆ, ರಾವಣನಾಗಿ ರತ್ನಾ ಟಿ. ಕೆ. ಭಟ್ ತಲಂಜೇರಿ, ಲಕ್ಷ್ಮಣನಾಗಿ ಪ್ರಶಾಂತ ಕುಮಾರ , ಹನುಮಂತನಾಗಿ ಗುಂಡ್ಯಡ್ಕ ಈಶ್ವರ ಭಟ್, ಮಾಯಾಸೀತೆಯಾಗಿ ಸುಜಾತ ಎಸ್. ತಂತ್ರಿ, ವಿಭೀಷಣನಾಗಿ ಕುಶಾಲಕ್ಷಿ ಬದಿಯಾರ್ ವಾಕ್ ಸಾಮರ್ಥ್ಯದಿಂದ ಕಲಾಸಕ್ತರ ಮನತಣಿಸಿದರು.
ಅಪರಾಹ್ನ ನಡೆದ ತಾಳಮದ್ದಳೆ ಪ್ರಸಂಗ ಶಿವಭಕ್ತ ವೀರಮಣಿ. ಮುಮ್ಮೇಳದಲ್ಲಿ ಭಾಗವತರಾಗಿ ಧ್ವನಿ ನೀಡಿದವರು ರಾಮಕೃಷ್ಣ ಮಯ್ಯ ಮತ್ತು ಆನೆಕಲ್ಲು ಗಣಪತಿ ಭಟ್. ಚೆಂಡೆಯಲ್ಲಿ ರಾಮ ಪ್ರಸಾದ್ ವದ್ವ ಮತ್ತು ಲಕ್ಷ್ಮೀಶ ಬೇಂಗ್ರೋಡಿ ಕೈಚಳಕ ಪ್ರದರ್ಶಿಸಿದರು. ವೀರಮಣಿಯಾಗಿ ಡಾ| ಎಮ್. ಪ್ರಭಾಕರ ಜೋಶಿ, ಹನುಮಂತನಾಗಿ ವಾಸುದೇವ ರಂಗಾ ಭಟ್ ಮತ್ತು ಪೊಳಲಿ ರಾಜಶೇಖರ ರಾವ್, ಈಶ್ವರನಾಗಿ ಮೋಹನರಾವ್ , ಶತ್ರುಷnನಾಗಿ
ಪಕಳಕುಂಜ ಶ್ಯಾಮಭಟ್, ರುಕ್ಮಾಂಗದ ಮತ್ತು ಶ್ರೀರಾಮನಾಗಿ ನರಸಿಂಹ ಮಯ್ಯ ಅಲೆತ್ತೂರು ಅರ್ಥ ವೈಭವವನ್ನು ಮೆರೆದರು. ಸಂಜೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಜರಗಿತ್ತು.