Advertisement
ಒಂದೂರಿನಲ್ಲಿ ಒಂದು ಕುಸ್ತಿ ಪಂದ್ಯ ಆಯೋಜನೆಗೊಂಡಿತ್ತು. ಆ ಪ್ರಾಂತ್ಯದ ಹಲವು ಹೆಸರಾಂತ ಜಗಜಟ್ಟಿಗಳು ಆ ಕೂಟದಲ್ಲಿ ಭಾಗವಹಿಸಿ ದ್ದರು. ಪಂದ್ಯದಲ್ಲಿ ಅಪ ರಿಚಿತ ಕುಸ್ತಿಪಟು ವೊಬ್ಬ ಆ ಪ್ರದೇಶದ ಬಲಾಡ್ಯ ಕುಸ್ತಿಪಟುವನ್ನು ಮಣ್ಣು ಮುಕ್ಕಿಸಿ ಬಿಟ್ಟ.
Related Articles
Advertisement
ಪಂದ್ಯಕ್ಕೆ ಸಾಕ್ಷಿಯಾಗಿದ್ದ ಆ ಊರಿನ ಒಬ್ಬ ಬಾಲಕ ಪಂದ್ಯದ ಬಳಿಕ ಆ ಕುಸ್ತಿಪಟುವಿನ ಮನೆಗೆ ಹೋದ. “ಸೋಲಿಗೆ ನಿಮ್ಮ ಪ್ರತಿಕ್ರಿಯೆ ಅಪೂರ್ವ ವಾದುದಾಗಿತ್ತು. ಬಹಳ ಅನಿರೀಕ್ಷಿತ ವಾದ ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಇಷ್ಟವಾಯಿತು’ ಎಂದು ಬಾಲಕ ಹೇಳಿದ.
“ಅದು ನನಗೂ ಬಹಳ ಅನಿರೀಕ್ಷಿತ ವಾಗಿತ್ತು. ಹಾಗಾಗಿ ನಾನೂ ಹೃತೂ³ರ್ವಕ ವಾಗಿ ನಕ್ಕುಬಿಟ್ಟೆ, ನಾನೂ ಕೇಕೆ ಹಾಕಿದೆ. ಸಾಧಾರಣ ಮನುಷ್ಯನೊಬ್ಬನನ್ನನ್ನು ಸೋಲಿಸಬಲ್ಲ ಎಂದು ನಾನೆಂದೂ ನಿರೀಕ್ಷಿಸಿ ರಲಿಲ್ಲ. ಈ ಬೆರಗು ನನ್ನಲ್ಲಿ ನಗು ಉಕ್ಕಿಸಿತು’ ಎಂದು ಆ ಕುಸ್ತಿಪಟು ಉತ್ತರಿಸಿದ.
“ನನ್ನ ಪಾಲಿಗೆ ಇಂದಿನ ವಿಜಯ ನಿಮ್ಮದು. ನಿಮ್ಮ ಈ ಜಯ ನನಗೆ ಎಂದೆಂದಿಗೂ ನೆನಪಿನಲ್ಲಿರುತ್ತದೆ’ ಎಂದು ಬಾಲಕ ನುಡಿದ.
ಹಲವು ವರ್ಷಗಳು ಕಳೆದವು. ಆ ಬಾಲಕ ದೊಡ್ಡವನಾದ. ಊರಿನಿಂದ ಬಹುದೂರ ದೊಡ್ಡ ವ್ಯಕ್ತಿಯಾಗಿ ಬೆಳೆದ. ಆದರೂ ಕುಸ್ತಿಪಟುವಿನ ಅಪೂರ್ವ ವಿಜಯವನ್ನು ಆತ ಎಂದೂ ಮರೆ ಯಲಿಲ್ಲ. ಒಂದು ದಿನ ಆತ ಮತ್ತೆ ತನ್ನ ಹುಟ್ಟೂರಿಗೆ ಭೇಟಿ ಕೊಟ್ಟು ವಯೋ ವೃದ್ಧನಾಗಿದ್ದ ಕುಸ್ತಿಪಟುವನ್ನು ಮಾತ ನಾಡಿಸಿದ.
“ನಿಮ್ಮ ಮುಖವನ್ನು ಹೇಗೆ ಮರೆ ಯಲಿ! ಸಣ್ಣ ಬಾಲಕನೊಬ್ಬ ಬಂದು, ಪಂದ್ಯದಲ್ಲಿ ನೀವು ಸೋತಿರ ಬಹುದು. ಆದರೆ ನನ್ನ ಪಾಲಿಗೆ ಇಂದಿನ ವಿಜಯಿ ನೀವೇ ಎಂದು ಹೇಳಿದವನನ್ನು ಹೇಗೆ ಮರೆಯಲಿ’ ಎಂದು ಕುಸ್ತಿಪಟು ಉತ್ತರಿಸಿದ.
ಜೀವನದಲ್ಲಿ ಸೋಲುಗಳು ಬರುತ್ತವೆ, ಗೆಲುವುಗಳು ಎದುರಾಗು ತ್ತವೆ. ಎಲ್ಲದರ ನಡುವೆ ನಾವು ನಾವಾಗಿ ಇರುವುದಕ್ಕೆ ಬಹಳ ಧೈರ್ಯ ಬೇಕು. ಸೋಲು, ನಿಂದನೆ, ಟೀಕೆಗಳು, ಏರಿಳಿತ ಗಳನ್ನು ಎದುರಿಸಿ ನಮ್ಮತನವನ್ನು ಕಾಪಾ ಡಿಕೊಳ್ಳುವುದು ಸರಳ – ಸುಲಭವಲ್ಲ. ಸಾಮಾನ್ಯವಾಗಿ ಗೆಲುವಿನಲ್ಲಿ ಉಬ್ಬಿ ಕಳೆದುಹೋಗುತ್ತೇವೆ, ಸೋಲಿನಿಂದ ಜರ್ಝರಿತರಾಗುತ್ತೇವೆ. ನಾವಾಗಿ ನೆಲೆ ನಿಲ್ಲುವುದಕ್ಕೆ ಬಹಳ ಬಹಳ ಧೈರ್ಯ ಬೇಕು.
(ಸಾರ ಸಂಗ್ರಹ)