Advertisement
ಹುಬ್ಬಳ್ಳಿ: ಕೋವಿಡ್-19ರ ಲಾಕ್‌ಡೌನ್ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು, ಅಭ್ಯರ್ಥಿಗಳಿಗೆ ನೆರವಾಗಲು ಎಸ್‌ಎಚ್‌ಎಲ್‌ಆರ್ ಟೆಕ್ನೋಸಾಫ್ಟ್ ಕಂಪನಿ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ವಿನ್ನರ್ ಡ್ರೀಮ್ಸ್ ಹಾಗೂ ವಿ ವರ್ಕ್ಸ್ ಸಾಫ್ಟ್‌ವೇರ್ ಕಂಪನಿಗಳು ಜಂಟಿಯಾಗಿ ವಿನ್ನರ್ ಡ್ರೀಮ್ಸ್ ಎಂಬ ಆ್ಯಪ್ ಸಿದ್ಧಪಡಿಸಿವೆ.
Related Articles
Advertisement
ಸಾಮಾನ್ಯ ಜ್ಞಾನದಲ್ಲಿ ನುರಿತ ಶಿಕ್ಷಕರು, ಐಎಎಸ್, ಕೆಎಸ್‌ಎಸ್ ತಜ್ಞರಿಂದ ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ವಿಶೇಷವೆಂದರೆ ತನ್ನಷ್ಟೆ ತಾನೇ ಆನ್‌ಲೈನ್ ಪರೀಕ್ಷೆ ಬಿಡುಗಡೆ ಮಾಡುತ್ತದೆ. ಇದರಲ್ಲಿ ಒಂದೇ ಸಮಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಬಹುವಿಧದ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ಯಾರು ಎಷ್ಟು ಸಮಯದಲ್ಲಿ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಎಷ್ಟು ತಪ್ಪು ಮಾಡಿದ್ದಾರೆ. ಮೊದಲಿಗೆ ಯಾರು ಸರಿಯಾದ ಉತ್ತರ ಕೊಟ್ಟು ಪ್ರಥಮರಾಗಿದ್ದಾರೆ ಎಂಬುದರ ಬಗ್ಗೆ ಸ್ವ-ಮೌಲ್ಯಮಾಪನ ಮಾಡಿಕೊಳ್ಳಬಹುದು.
ವಿನ್ನರ್ ಡ್ರೀಮ್ಸ್ ಆ್ಯಪ್‌ನಲ್ಲಿ ಪ್ರತಿದಿನ ಅಥವಾ 2 ಇಲ್ಲವೆ 3 ದಿನಕ್ಕೊಮ್ಮೆ 25, 50, 100 ಅಂಕಗಳುಳ್ಳ 20-25 ನಿಮಿಷದ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುತ್ತದೆ. ಇದರಲ್ಲಿ ಸಮಾಜ ವಿಜ್ಞಾನ, ಸಾಮಾನ್ಯಜ್ಞಾನ, ಗಣಿತ, ಜೀವಶಾಸ್ತ್ರ, ಅನಾಲೇಟಿಕಲ್, ರಿಜನಿಂಗ್ ಎಬಿಲಿಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರಶ್ನೆಪತ್ರಿಕೆಗಳುಳ್ಳ ಪರೀಕ್ಷೆ ನಡೆಸುತ್ತದೆ. ಇನ್‌ಸ್ಟಿಟ್ಯೂಟ್ ಆಫ್ ವಿನ್ನರ್ ಡ್ರೀಮ್ಸ್‌ನವರು ನುರಿತ ಬೋಧನಾ ವಿಭಾಗದ ತಂಡದೊಂದಿಗೆ ಎಸ್ ಎಸ್‌ಎಲ್‌ಸಿ, ಪಿಯುಸಿ, ನೀಟ್, ಜೆಇಇ, ಎಫ್‌ಡಿಎ, ಪೊಲೀಸ್, ಪಿಎಸ್‌ಐ, ಕೆಪಿಎಸ್‌ಸಿ, ಯುಪಿಎಸ್ ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪರೀಕ್ಷೆಗಳನ್ನು ನಡೆಸುತ್ತದೆ. ಸರ್ಕಾರದೊಂದಿಗೆ ಒಡಂಬಡಿಕೆಗೆ ಚರ್ಚೆ: ವಿನ್ನರ್ ಡ್ರೀಮ್ಸ್ ಆ್ಯಪ್ ಸಿದ್ಧಪಡಿಸಿರುವ ಕಂಪನಿಯವರು ಇದನ್ನು ರಾಜ್ಯಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ತಲುಪಿಸುವ ಸಲುವಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗಿದೆಯಂತೆ.
ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಉಚಿತ: ವಿನ್ನರ್ ಡ್ರೀಮ್ಸ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆಸಕ್ತರು ಕೂಡಲೇ ವಿನ್ನರ್ ಡ್ರೀಮ್ಸ್ ಎಂದು ಟೈಪ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್‌ನ ಟೆಕ್ನಿಕಲ್ ಪಾರ್ಟನರ್ ಎಸ್‌ಎಚ್ ಎಲ್‌ಆರ್ ಟೆಕ್ನೋಸಾಫ್ಟ್ ಕಂಪನಿಯಾಗಿದ್ದರೆ, ಇನ್‌ಸ್ಟಿಟ್ಯೂಟ್ ಆಫ್ ವಿನ್ನರ್ ಡ್ರೀಮ್ಸ್ ನ್ವಾಲೇಜ್ ಪಾರ್ಟನರ್ ಹಾಗೂ ವಿ ವರ್ಕ್ಸ್ ಸಾಫ್ಟ್‌ವೇರ್ ಕಂಪನಿಯು ಮಾರ್ಕೇಟಿಂಗ್ ಪಾರ್ಟನರ್ ಆಗಿದೆ. ಈ ಮೂರೂ ಸಂಸ್ಥೆಗಳು ಸೇರಿ ವಿನ್ನರ್ ಡ್ರೀಮ್ಸ್ ಆ್ಯಪ್ ಸಿದ್ಧಪಡಿಸಿವೆ.