Advertisement

IAF ಹಾಸ್ಟೆಲ್‌ಗೆ ಅಭಿನಂದನ್‌ ಶಿಫ್ಟ್ , ರಾಜಸ್ಥಾನದ ಮಗು ‘ಅಭಿನಂದನ್‌’

09:49 AM Mar 02, 2019 | Team Udayavani |

ಹೊಸದಿಲ್ಲಿ : ಪಾಕಿಸ್ಥಾನದ ಸೆರೆಯಲ್ಲಿದ್ದು ನಿನ್ನೆ ಬಿಡುಗಡೆಗೊಂಡಿದ್ದ ಭಾರತೀಯ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೇನಾ ಆಸ್ಪತ್ರೆಯಲ್ಲಿ ಕೂಲಂಕಷ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಇದೀಗ ಅವರನ್ನು  ಭಾರತೀಯ ವಾಯು ಪಡೆಯ ಹಾಸ್ಟೆಲ್‌ ಗೆ ಸ್ಥಳಾಂತರಿಸಲಾಗಿದೆ. 

Advertisement

ಪಾಕಿಸ್ಥಾನದ ಸೆರೆಯಲ್ಲಿರುವಾಗ ಅಭಿನಂದನ್‌ ದೇಹ ಮತ್ತು ಮನಸ್ಸಿನ ಮೇಲೆ ಯಾವೆಲ್ಲ ಪ್ರಯೋಗಗಳನ್ನು ಶತ್ರು ಸೈನಿಕರು ಮಾಡಿರಬಹುದು ಎಂಬುದನ್ನು ವೈದ್ಯಕೀಯವಾಗಿ ಪತ್ತೆ ಹಚ್ಚುವ ಸಲುವಾಗಿ ಅವರ ಫ‌ುಲ್‌ ಬಾಡಿ ಸ್ಕ್ಯಾನಿಂಗ್‌ ನಡೆಸಲಾಗಿತ್ತು ಎಂದು ಮಾಧ್ಯಮ ವರದಿಗಳು ಇಂದು ಬೆಳಗ್ಗೆ ತಿಳಿಸಿವೆ. 

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ ಹೊತ್ತಿಗೆ ರಾಜಸ್ಥಾನದ ಅಳವಾರ್‌ ನಲ್ಲಿ ಜನಿಸಿದ್ದ ಮಗುವಿಗೆ ಅಭಿನಂದನ್‌ ಎಂದು ಹೆಸರಿಡಲಾಗಿರುವುದಾಗಿ ವರದಿಗಳು ತಿಳಿಸಿವೆ. 

ಮಗುವಿನ ಅಜ್ಜ ಜಾನೇಶ್‌ ಭೂತಾನಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ‘ನನ್ನ ಸೊಸೆ ನಿನ್ನೆ ಶುಕ್ರವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಳು; ನಮಗೆ ವಿಂಗ್‌ ಕಮಾಂಡರ್‌ ಅಭಿನಂದನ್‌ ತೋರಿರುವ ಧೈರ್ಯ, ಸಾಹಸಗಳ ಬಗ್ಗೆ ಅತೀವ ಹೆಮ್ಮೆ ಇದೆ; ಆ ಪ್ರಕಾರ ನಾವು ಆತನ ಹೆಸರನ್ನು ಹೆಮ್ಮೆಯಿಂದ ನಮ್ಮ ಮೊಮ್ಮಗನಿಗೆ ಇಟ್ಟಿದ್ದೇವೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next