Advertisement
ವಾಘಾ ಅಟಾರಿ ಗಡಿಯಲ್ಲಿ ಶಸ್ತ್ರ ಸಜ್ಜಿತ ಪಾಕ್ ಭದ್ರತಾ ಪಡೆಗಳ ನಡುವೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತ ಬಂದ ಅಭಿನಂದನ್ ಅವರನ್ನು ಭಾರತೀಯ ಸೇನಾ ಅಧಿಕಾರಿಗಳು ಆಲಿಂಗನ ಮಾಡಿಕೊಂಡು ಆತ್ಮೀಯವಾಗಿ ಬರ ಮಾಡಿಕೊಂಡರು.
Related Articles
Advertisement
ಭಾರತದ ಕಡೆಯಿಂದ ಎಲ್ಲಾ ರೀತಿಯಲ್ಲಿ ಕಾಗದ ಪತ್ರಗಳ ಕೆಲಸ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾದರೂ, ಲಾಹೋರ್‌ನಲ್ಲಿ ಅಭಿನಂದನ್‌ರನ್ನು ತಡೆದು ಕೆಲ ಕಾಗದ ಪತ್ರಗಳ ಕೆಲಸಗಳನ್ನು ಪಾಕ್ ತಡೆ ಮಾಡಿದೆ ಎಂದು ತಿಳಿದು ಬಂದಿದೆ.ಪಾಕ್ ಸರ್ಕಾರಕ್ಕೆ ಐಎಸ್‌ಐ ಒತ್ತಡ ಹಾಕಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಕಸ್ಟಮ್ಸ್ ಮತ್ತು ವಲಸೆ ವಿಭಾಗದ ಕೆಲ ಪ್ರಕ್ರಿಯೆಗಳಲ್ಲಿ ಪಾಕ್ ಉದ್ದೇಶ ಪೂರ್ವಕವಾಗಿ ವಿಳಂಬ ತೋರಿದೆ ಎಂದು ವರದಿಯಾಗಿದೆ.
ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಲಿಲಾಗಿದೆ.
ಅಭಿನಂದನ್ ಪೋಷಕರು ಕೂಡಾ ಗಡಿಯಲ್ಲಿ ಹಾಜರಿದ್ದು ಮಗನ ಬರುವಿಕೆಗಾಗಿ ಕಾಯುತ್ತಿದ್ದರು.
ಗಡಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು, ಮೂರು ಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು.