Advertisement

ಮನೆ ಕಿಟಕಿ, ಬಾಗಿಲಿಗೆ 73 ಲಕ್ಷ! : ಜಗನ್‌ ನಿವಾಸ, ಕ್ಯಾಂಪ್‌ ಆಫೀಸ್‌ ದುರಸ್ತಿಗೆ 5.73 ಕೋಟಿ

09:50 AM Nov 10, 2019 | Team Udayavani |

ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಅಧಿಕೃತ ನಿವಾಸ ಮತ್ತು ಕ್ಯಾಂಪ್‌ ಆಫೀಸ್‌ ನವೀಕರಣ ಮತ್ತು ದುರಸ್ತಿಗಾಗಿ ಮಾಡುತ್ತಿರುವ ವೆಚ್ಚವು ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಕೇವಲ ಕಿಟಕಿ-ಬಾಗಿಲುಗಳಿಗೇ 73 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಟಿಡಿಪಿ ನೇತೃತ್ವದ ಸರಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಹಲವು ಕಟ್ಟಡಗಳನ್ನು ಕೆಡವಿ ಹಾಕಿದ್ದಕ್ಕೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಂಡಿರುವ ಜಗನ್ಮೋಹನ ರೆಡ್ಡಿ ವೆಚ್ಚದ ಕಾರಣಕ್ಕಾಗಿ ಟೀಕೆ ಎದುರಿಸುವಂತಾಗಿದೆ.

ಮೇ 30ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೂ. 25ರಂದು ಹೊರಡಿಸಲಾದ ಆದೇಶದ ಪ್ರಕಾರ ವಿಜಯವಾಡ ಜಿಲ್ಲೆಯ ತಡೇಪಲ್ಲಿ ಗ್ರಾಮದಲ್ಲಿರುವ ನಿವಾಸಕ್ಕೆ ತೆರಳುವ ರಸ್ತೆ ವಿಸ್ತರಣೆ ಮಾಡುವುದು ಮತ್ತು ಇತರ ಕಾಮಗಾರಿಗಳಿಗಾಗಿ 5 ಕೋಟಿ ರೂ., ಮತ್ತೊಂದು ಆದೇಶದಲ್ಲಿ ಪೊಲೀಸ್‌ ಬ್ಯಾರೆಕ್‌, ಭದ್ರತಾ ಸಿಬಂದಿ ಕೊಠಡಿ, ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ 1.89 ಲಕ್ಷ ರೂ., ಜು. 9ರಂದು ಹೊರಡಿಸಲಾಗಿದ್ದ ಮತ್ತೂಂದು ಆದೇಶದಲ್ಲಿ ವೈರ್‌ಗಳ ಬದಲಾವಣೆಗಾಗಿ 8.5 ಲಕ್ಷ ರೂ., ಹೈದರಾಬಾದ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭದ್ರತಾ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ 24.5 ಲಕ್ಷ ರೂ., ಇದರ ಜತೆಗೆ ಸಿಎಂ ನಿವಾಸಕ್ಕೆ 73 ಲಕ್ಷ ರೂ. ವೆಚ್ಚದಲ್ಲಿ ಅಲ್ಯುಮಿನಿಯಂ ಕಿಟಕಿ ಮತ್ತು ಬಾಗಿಲುಗಳ ಅಳವಡಿಕೆಗೆ ಕೂಡ ಆದೇಶ ಹೊರಡಿಸಲಾಗಿದೆ.

ವಿಪಕ್ಷ ನಾಯಕ ಚಂದ್ರಬಾಬು ನಾಯ್ಡು ‘ಮಿತಿಮೀರಿದ ವೆಚ್ಚ’ ಎಂದು ಟೀಕಿಸಿದ್ದಾರೆ. ಪುತ್ರ ನರಾ ಲೋಕೇಶ್‌ ಕೂಡ ಟೀಕೆ ಮಾಡಿ ‘1 ರೂ. ಸಂಬಳ ಸ್ವೀಕರಿಸುವುದಾಗಿ ಹೇಳಿ ಮುಖ್ಯಮಂತ್ರಿ ದುಂದು ವೆಚ್ಚ ಮಾಡುತ್ತಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next