Advertisement
ಮೊದಲು ಬ್ಯಾಟಿಂಗ್ ನಡೆಸಿದ ಸುನೀಲ್ ಆ್ಯಂಬ್ರಿಸ್ ಪಡೆ 9 ವಿಕೆಟಿಗೆ 298 ರನ್ನುಗಳ ಬೃಹತ್ ಮೊತ್ತ ಪೇರಿಸಿದರೆ, ಅಕ್ಷರ್ ಪಟೇಲ್ ಪರಾಕ್ರಮದಿಂದ ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿದ ಭಾರತ ‘ಎ’ 9 ವಿಕೆಟಿಗೆ 293 ರನ್ ಗಳಿಸಿ ಶರಣಾಯಿತು. ಮೊದಲ 3 ಪಂದ್ಯಗಳನ್ನು ಗೆದ್ದ ಮನೀಷ್ ಪಾಂಡೆ ಸಾರಥ್ಯದ ಭಾರತ ತಂಡ ಸರಣಿ ವಶಪಡಿಸಿಕೊಂಡಿತ್ತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ನಡೆಯಲಿದೆ.
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಭಾರತ ಭರ್ಜರಿ ಆರಂಭ ಪಡೆಯಲು ವಿಫಲವಾಯಿತು. ಋತುರಾಜ್ ಗಾಯಕ್ವಾಡ್ (20), ಅನ್ಮೋಲ್ಪ್ರೀತ್ ಸಿಂಗ್ (11) 36 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಹನುಮ ವಿಹಾರಿ (20), ಕೃಣಾಲ್ ಪಾಂಡ್ಯ (45), ಮನೀಷ್ ಪಾಂಡೆ (24) ಕೂಡ ಬೇಗನೇ ವಾಪಸಾದರು. 26ನೇ ಓವರ್ ವೇಳೆ 127 ರನ್ನಿಗೆ 5 ವಿಕೆಟ್ ಹಾರಿ ಹೋಯಿತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅಕ್ಷರ್ ಪಟೇಲ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದಾಗ ಪಂದ್ಯ ರೋಚಕ ಘಟ್ಟ ತಲುಪಿತು; ಭಾರತಕ್ಕೂ ಗೆಲುವಿನ ಅವಕಾಶ ತೆರೆಯಲ್ಪಟ್ಟಿತು. ಆದರೆ ಸ್ವಲ್ಪದರಲ್ಲೇ ಅದೃಷ್ಟ ಕೈಕೊಟ್ಟಿತು. ಆಗ ಅಕ್ಷರ್ ಪಟೇಲ್ 63 ಎಸೆತಗಳಿಂದ 81 ರನ್ ಮಾಡಿ ಅಜೇಯರಾಗಿದ್ದರು (8 ಬೌಂಡರಿ, 1 ಸಿಕ್ಸರ್).
Related Articles
Advertisement
ಸಂಕ್ಷಿಪ್ತ ಸ್ಕೋರ್ : ವೆಸ್ಟ್ ಇಂಡೀಸ್ ‘ಎ’-9 ವಿಕೆಟಿಗೆ 298 (ರೋಸ್ಟನ್ ಚೇಸ್ 84, ಥಾಮಸ್ 70, ಕಾರ್ಟರ್ 50, ಖಲೀಲ್ ಅಹ್ಮದ್ 67ಕ್ಕೆ 4, ಆವೇಶ್ ಖಾನ್ 62ಕ್ಕೆ 3). ಭಾರತ ‘ಎ’-9 ವಿಕೆಟಿಗೆ 293 (ಅಕ್ಷರ್ ಔಟಾಗದೆ 81, ಕೆ. ಪಾಂಡ್ಯ 45, ವಾಷಿಂಗ್ಟನ್ 45, ಪೊವೆಲ್ 47ಕ್ಕೆ 2, ಪೌಲ್ 61ಕ್ಕೆ 2). ಪಂದ್ಯಶ್ರೇಷ್ಠ: ರೋಸ್ಟನ್ ಚೇಸ್.