Advertisement
ಅಮೆರಿಕದ ಫ್ಲೋರಿಡಾದಲ್ಲಿ ಆ. 3ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಬೊÅವಾರ್ಡ್ ಕೌಂಟಿ ಕ್ರೀಡಾಂಗಣದಲ್ಲಿ ಆ. 3 ಮತ್ತು 4ರಂದು ಮೊದಲೆರಡು ಪಂದ್ಯಗಳು ನಡೆಯಲಿವೆ.
Related Articles
ವಿಂಡೀಸ್ ತಂಡವನ್ನು ಕಾರ್ಲೋಸ್ ಬ್ರಾತ್‌ವೇಟ್ ಮುನ್ನಡೆಸಲಿದ್ದಾರೆ. ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅವರನ್ನು ಕೂಡ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಅವರು ಸರಣಿ ಮೊದಲು ನಡೆಯುವ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕಾಗಿದೆ. ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶದಿಂದ ರಸೆಲ್ ವಿಶ್ವಕಪ್‌ನ ಆರಂಭದಲ್ಲಿಯೇ ತಂಡವನ್ನು ತ್ಯಜಿಸಿದ್ದರು.
Advertisement
ಕ್ರಿಸ್ ಗೇಲ್ ಇಲ್ಲಕೆನಡದಲ್ಲಿ ನಡೆಯಲಿರುವ ಟಿ20 ಕೂಟದಲ್ಲಿ ಆಡಲು ಒಪ್ಪಿಕೊಂಡ ಕಾರಣ ಭಾರತ ವಿರುದ್ಧದ ಸರಣಿಗೆ ಲಭ್ಯವಿಲ್ಲವೆಂದು ಕ್ರಿಸ್ ಗೇಲ್ ಸೂಚಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ಮುಂದಿನ ವರ್ಷ ಐಸಿಸಿ ಟಿ20 ವಿಶ್ವಕಪ್ ನಡೆಯುವ ಕಾರಣ ತಂಡವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡ ಸಮತೋಲಿತ ತಂಡ. ನಾವು ಕೇವಲ ಭಾರತದ ವಿರುದ್ಧದ ಸರಣಿಗಾಗಿ ತಂಡವನ್ನು ಆಯ್ಕೆ ಮಾಡಿಲ್ಲ. ಬದಲಾಗಿ ಮುಂಬರುವ ಟಿ20 ವಿಶ್ವಕಪ್‌ಗಾಗಿ ತಂಡವನ್ನು ಸಿದ್ಧಪಡಿಸುತ್ತಿದ್ದೇವೆ. ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರಿಯಾದ ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆ ಎಂದು ಹೇಯ್ನ$Õ ವಿವರಿಸಿದರು. ಐಪಿಎಲ್ ಅನುಭವ
ತಂಡಕ್ಕೆ ಆಯ್ಕೆ ಮಾಡಿದ ಹೆಚ್ಚಿನ ಆಟಗಾರರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರೆಲ್ಲ ಭಾರತೀಯ ಆಟಗಾರರ ಬಗ್ಗೆ ತಿಳಿದಿದ್ದಾರೆ. ತವರಿನಲ್ಲಿ ಆಡುತ್ತಿರುವ ಕಾರಣ ನಾವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಸ್ಪಿನ್ನರ್ ನಾರಾಯಣ್ ಟಿ20ಯಲ್ಲಿ ವಿಂಡೀಸ್ ಪರ 2 ವರ್ಷ ಹಿಂದೆ ಆಡಿದ್ದರೆ ಪೊಲಾರ್ಡ್ ಕಳೆದ ನವೆಂಬರ್‌ನಲ್ಲಿ ಭಾರತ ಪ್ರವಾಸದ ವೇಳೆ ಆಡಿದ್ದರು. ಅವರಿಬ್ಬರು ಟಿ20ಯಲ್ಲಿ ಅಪಾರ ಅನುಭವ ಹೊಂದಿದ್ದಾರೆ ಎಂದು ಹೇಯ್ನ$Õ ಹೇಳಿದರು. ವಿಂಡೀಸ್ ಟಿ20 ತಂಡ
ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ಸುನೀಲ್ ನಾರಾಯಣ್, ಕೀಮೊ ಪಾಲ್, ಖಾರಿ ಪೀರ್, ಕೈರನ್ ಪೊಲಾರ್ಡ್, ನಿಕೋಲಾಸ್ ಪೂರನ್, ರೋಮನ್ ಪೊವೆಲ್, ಆ್ಯಂಡ್ರೆ ರಸೆಲ್, ಒಶಾನೆ ಥಾಮಸ್, ಅಂತೋನಿ ಬ್ರ್ಯಾಂಬಲ್, ಜಾನ್ ಕ್ಯಾಂಬೆಲ್, ಶೆಲ್ಡನ್ ಕಾಟ್ರೆಲ್ ಶಿಮ್ರಾನ್ ಹೆಟ್‌ಮೈರ್, ಎವಿನ್ ಲೂವಿಸ್.