Advertisement
ಕುಂದಾಪುರ ಭಾಗದ ಬಸ್ರೂರು, ತೆಕ್ಕಟ್ಟೆ, ಕೆದೂರು ಪರಿಸರದಲ್ಲಿ ಮಳೆ ಯಾಗಿದೆ. ಉಡುಪಿ, ಮಣಿಪಾಲ ಸುತ್ತ ಮುತ್ತ ಸಾಧಾರಣ ಮಳೆ ಸುರಿದಿದೆ.
ಕಾಸರಗೋಡು: ಸಿಡಿಲು ಬಡಿದು ಸಿಪಿಎಂ ವಲಿಯಪರಂಬ ಸೌತ್ ವಿಲೇಜ್ ಸಮಿತಿ ಸದಸ್ಯೆ ಮಾಡಕ್ಕಲ್‌ನ ತೆಟ್ಟನ್ ಕಲ್ಯಾಣಿ (69) ಸಾವಿಗೀಡಾದರು. ರವಿವಾರ ಸಂಜೆ ಮನೆ ಸಮೀಪ ತೆಂಗಿನ ಕಾಯಿ ಹೆಕ್ಕುತ್ತಿದ್ದಾಗ ಸಿಡಿಲು ಬಡಿದು ಸಾವು ಸಂಭವಿಸಿತ್ತು.
Related Articles
ತೆಕ್ಕಟ್ಟೆ: ಕೆದೂರು ಗ್ರಾ.ಪಂ. ವ್ಯಾಪ್ತಿಯ ಹೊಸಮಠ ಪರಿಶಿಷ್ಟ ಕಾಲನಿಯ ಸಮೀಪ ಸೋಮವಾರ ಸಂಜೆ ಭಾರೀ ಗಾಳಿಯಿಂದ ಬೃಹತ್ ಮರವೊಂದು ತೆಕ್ಕಟ್ಟೆ – ದಬ್ಬೆಕಟ್ಟೆ ಪ್ರಮುಖ ಸಂಪರ್ಕ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ತತ್‌ಕ್ಷಣ ಸ್ಥಳೀಯ ಯುವ ಮುಖಂಡ ನಿಶ್ಚಿತ್ ಶೆಟ್ಟಿ ಹೊಸಮಠ ಅವರು ಸಂಬಂಧಪಟ್ಟ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.
Advertisement
ಅಜೆಕಾರು/ ಪುಂಜಾಲಕಟ್ಟೆ: ಕಾರ್ಕಳದ ಈದು ಮತ್ತು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.
ಸೋಮವಾರ ಸಂಜೆ ಸಿಡಿಲು ಬಡಿದು ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್‌ಬೆಟ್ಟು ಗ್ರಾಮದ ಜಾಣ ಮನೆ ನಿವಾಸಿ ಜಿಗೀಶ್ ಜೈನ್ (38) ಮೃತ ಪಟ್ಟಿದ್ದಾರೆ. ಈ ಸಂದರ್ಭ ಮನೆಯಲ್ಲಿದ್ದ ವಯೋವೃದ್ಧ ತಂದೆ- ತಾಯಿ ಅಪಾಯದಿಂದ ಪಾರಾ ಗಿದ್ದಾರೆ.
ಶೀಟ್‌ಗೆ ಬಡಿದ ಸಿಡಿಲುಜಿಗೀಶ್ ಸೋಮವಾರ ಸಂಜೆ 3.45ರ ವೇಳೆ ಮಳೆ ಆರಂಭಗೊಂಡಾಗ ಮನೆಯ ಮೆಟ್ಟಿಲಿಗೆ ನೀರು ಬೀಳದಂತೆ ಹಾಕಿದ್ದ ಕಬ್ಬಿಣದ ಶೀಟ್ ಅನ್ನು ಸರಿಪಡಿಸುತ್ತಿದ್ದಾಗ ಸಿಡಿಲು ಬಡಿದಿತ್ತು. ಅವರ ಒಂದು ಕೈ ಕರಟಿ ಹೋಗಿತ್ತು. ಸಿಡಿಲು ಬಡಿದಾಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಪ್ರಗತಿಪರ ಕೃಷಿಕ
ಜಿಗೀಶ್ ಅವರು ಅವಿವಾಹಿತ ರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಕಂಬಳದ ಕೋಣಗಳನ್ನೂ ಸಾಕು ತ್ತಿದ್ದರು. ಅಧಿಕಾರಿಗಳ ಭೇಟಿ
ಘಟನೆ ನಡೆದ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಕಂದಾಯ ಅಧಿಕಾರಿ ಶಿವಪ್ರಸಾದ್, ವಿ.ಎ. ಬಾಲಕೃಷ್ಣ, ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ಉಪಾಧ್ಯಕ್ಷ ವಿಜಯ್ ಕುಮಾರ್ ಭೇಟಿ ನೀಡಿದ್ದಾರೆ. ಶೀಘ್ರ ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಂಡವರಕಲ್ಲು: ಮಲಗಿದ್ದಾಗ
ಸಿಡಿಲು ಬಡಿದು ವ್ಯಕ್ತಿ ಸಾವು
ಪುಂಜಾಲಕಟ್ಟೆ: ಸಿಡಿಲು ಬಡಿದು ಯುವಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ವಿದ್ಯಾನಗರ ಕುತ್ತಾಡಿಯಲ್ಲಿ ನಡೆದಿದೆ. ಕೃಷ್ಣಪ್ಪ ಪೂಜಾರಿ ಅವರ ಪುತ್ರ ಲೋಕೇಶ್ (35) ಮೃತ ಯುವಕ. ಲೋಕೇಶ್ ಕೂಲಿ ಕಾರ್ಮಿಕರಾಗಿದ್ದು, ಸೋಮವಾರ ರಜೆ ಮಾಡಿ ಮನೆಯಲ್ಲಿದ್ದರು. ಅಪರಾಹ್ನ 3 ಗಂಟೆಗೆ ಮಲಗಿದ್ದ ವೇಳೆ ಸಿಡಿಲಿನ ಆಘಾತದಿಂದ ಮೃತಪಟ್ಟಿರುವುದಾಗಿ ಅವರ ಪತ್ನಿ ಹೇಮಲತಾ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಅಂಡಾರು: ಗಾಳಿ ಮಳೆಗೆ ಹಾನಿ
ಅಜೆಕಾರು: ಅಂಡಾರು ಮತ್ತು ಸುತ್ತಮುತ್ತಲ ಪರಿಸರದಲ್ಲಿ ಸೋಮವಾರ ಸಂಜೆ ಗಾಳಿ ಮಳೆಗೆ ಹಲವರ ಅಡಿಕೆ ತೋಟ ಮತ್ತು ಮನೆ ಮೇಲ್ಛಾವಣಿಗಳಿಗೆ ಹಾನಿಯಾಗಿದೆ. ಅಂಡಾರು ಪೈತಾಳ ನಿವಾಸಿ ಸಂತೋಷ್ ಅವರ ಹಲವು ಅಡಿಕೆ ಮರಗಳು ನೆಲಕ್ಕುರುಳಿವೆ. ಕೊಟ್ಟಿಗೆ ಮೇಲ್ಛಾವಣಿಯ ತಗಡಿನ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಗಂಟುಬೀಳು: ಬಿರುಗಾಳಿ, ಹಾನಿ
ಸಿದ್ದಾಪುರ: ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಕೊಂಜಾಡಿ ಗಂಟು ಬೀಳು ಪರಿಸರದಲ್ಲಿ ಸೋಮವಾರ ಸಂಜೆ ವೇಳೆ ಗಾಳಿಗೆ ಅಪಾರ ಹಾನಿ ಸಂಭವಿಸಿದೆ. ಬೆಳ್ಳಿ ಬಾೖ ಅವರ ಮನೆಯ ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಅಡಿಕೆ, ಬಾಳೆಗಿಡಗಳಿಗೆ ಹಾನಿಯಾಗಿದೆ.