Advertisement

ಕರಾವಳಿಯ ವಿವಿಧೆಡೆ ಸಿಡಿಲು ಸಹಿತ ಗಾಳಿ ಮಳೆ

01:09 AM Apr 05, 2019 | sudhir |

ಮಂಗಳೂರು/ಉಡುಪಿ: ಕುಂದಾಪುರದ ಬೆಳ್ವೆ, ಸಿದ್ದಾಪುರ ಪರಿಸರ, ಕಾರ್ಕಳ ತಾಲೂಕಿನ ವಿವಿಧೆಡೆ, ದ.ಕ. ಜಿಲ್ಲೆಯ ವೇಣೂರು ಪರಿಸರದಲ್ಲಿ ಗುರುವಾರ ಅಪರಾಹ್ನ ಗುಡುಗು ಸಹಿತ ಮಳೆಯಾಗಿದೆ.

Advertisement

ಹೆಬ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ 4ರಿಂದ ಒಂದು ಗಂಟೆ ಕಾಲ ಉತ್ತಮ ಮಳೆಯಾಗಿದೆ. ಮಳೆಯ ಜತೆ ಸಿಡಿಲು ಗುಡುಗುಗಳಿಂದ್ದಿರಿಂದ ಈ ಪ್ರದೇಶದಲ್ಲಿ ರಾತ್ರಿ 7ರ ತನಕ ವಿದ್ಯುತ್‌ ಸ್ಥಗಿತಗೊಂಡಿತ್ತು.

ಮಡಿಕೇರಿಯ ವಿವಿಧೆಡೆ ಗುಡುಗು, ಸಹಿತ ಮಳೆ
ಮಡಿಕೇರಿ: ಬಿಸಿಲ ಬೇಗೆಯಿಂದ ಬೇಸತ್ತಿದ್ದ ಕೊಡಗಿನಲ್ಲಿ ಗುರುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಅಪರಾಹ್ನ ಮಡಿಕೇರಿ ತಾ| ಸಹಿತ ಜಿಲ್ಲೆಯ ಅನೇಕ ಕಡೆ ಗುಡುಗು, ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು, ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ. ನದಿಗಳಲ್ಲಿ ನೀರಿನ ಮಟ್ಟ ಕುಸಿದು ತೋಟಗಳಿಗೆ ಸಿಂಪಡಿಸಲು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಸೋಮವಾರಪೇಟೆಯಲ್ಲಿ ಆಲಿಕಲ್ಲು ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next