ಚಿಂತಾಮಣಿ: ಜನರ ಸೇವೆ ನಿಷ್ಠೆಯಿಂದ ಮಾಡುವವನೇ ನಿಜವಾದ ನಾಯಕ. ಚುನಾವಣೆ ಸಮಯದಲ್ಲಿ ಅಂತಹವರನ್ನು ಗೆಲ್ಲಿಸಿದರೆ ಮಾತ್ರ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದು ಕೆ.ಎಂ.ಕೆ. ಟ್ರಸ್ಟ್‌ನ ಜಿ.ಎನ್. ವೇಣುಗೋಪಾಲ್ ತಿಳಿಸಿದರು.
ತಾಲೂಕಿನ ಮಾಡಿಕೆರೆ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕೆ.ಎಂ.ಕೆ. ಟ್ರಸ್ಟ್‌ಗೆ ಸೇರ್ಪಡೆಯಾದ ಹಲವು ಯುವಕರನ್ನು ಸ್ವಾಗತಿಸಿ ಮಾತನಾಡಿ, ಶಾಸಕ, ಸಂಸದರಾಗುವುದು ಮುಖ್ಯವಲ್ಲ. ಪ್ರತಿ ಗ್ರಾಮದಲ್ಲಿ ರೈತರಿಗೆ, ಅವರ ಮಕ್ಕಳಿಗೆ ಸೌಲಭ್ಯ ಕೊಡಿಸಿದಾಗ ಮಾತ್ರ ತನ್ನ ಸ್ಥಾನಕ್ಕೆ ಗೌರವ ಸಿಗುತ್ತದೆ ಎಂದು ಹೇಳಿದರು.
ದೇವನಹಳ್ಳಿಯಲ್ಲಿ ನಾನು 15 ವರ್ಷ ವಿಎಸ್‌ಎಸ್ ಎನ್ ಅಧ್ಯಕ್ಷನಾಗಿದ್ದೆ. ರೈತರ ಸಮಸ್ಯೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸ, ವಸತಿ ಶಾಲೆ, ಉನ್ನತ ಶಿಕ್ಷಣಕ್ಕಾಗಿ ಸೌಲಭ್ಯ ಕೊಡಿಸುತ್ತಿದ್ದೆ. ಅವರ ಮಕ್ಕಳಿಗೆ ಬ್ಯಾಂಕ್ ಮೂಲಕ ಸಾಲ ಕೊಡಿಸುತ್ತಿದ್ದೆ. ಈ ರೀತಿಯ ಸೇವೆ ತರಬೇತಿ ನನ್ನ ಬಳಿ ಇದ್ದ ಕಾರಣ ನನ್ನನ್ನು ದೇವನಹಳ್ಳಿಯಲ್ಲಿ 3 ಬಾರಿ ಪುರಸಭೆ ಸದಸ್ಯನಾಗಿ ಆಯ್ಕೆ ಮಾಡಿದ್ದರು ಎಂದು ವಿವರಿಸಿದರು.
ಕೆ.ಎಂ.ಕೆ.ಟ್ರಸ್ಟ್‌ನ ಮುಖಂಡ ಅಂಕಣ್ಣ ಮಾತನಾಡಿ, ಮುಂದೆ 2023ರಲ್ಲಿ ನಡೆಯಬೇಕಾಗಿರುವ ಚುನಾವಣೆ ಯಲ್ಲಿ ವೇಣುಗೋಪಾಲ್ ಸ್ಪರ್ಧಿಸುವುದು ಖಚಿತ ಎಂದರು. ಪೆದ್ದೂರು ನಾಗರಾಜರೆಡ್ಡಿ ಮಾತನಾಡಿ, ಹಣ ಎಲ್ಲರ ಬಳಿ ಇರುತ್ತದೆ. ಆದರೆ, ಸೇವೆ ಮಾಡುವ ಮನೋ ಭಾವ ಇರುವುದಿಲ್ಲ ಎಂದರು.
ಈ ಸಮಯದಲ್ಲಿ ಮುಖಂಡರಾದ ಶೇಖರ್‌ರೆಡ್ಡಿ, ಅಕ್ಕಿಮಂಗಲ ನಾರಾಯಣಸ್ವಾಮಿ, ಮಂಜುನಾಥಾಚಾರಿ, ನಾರಾಯಣಹಳ್ಳಿ ಚಂದ್ರು, ಚಂಗಪ್ಪ, ಕೋಡಿಹಳ್ಳಿ ಶ್ರೀನಿವಾಸ, ವಜೀರ್, ಕೃಷ್ಣೋಜಿರಾವ್ ಮತ್ತಿತರರು ಹಾಜರಿದ್ದರು. ಸೇರ್ಪಡೆ: ಮಾಡಿಕೆರೆ ಗ್ರಾಮದ ರಾಮಾಂಜಿ, ನರಸಿಂಹಪ್ಪ, ಗೋವಿಂದಪ್ಪ, ಮಂಜುನಾಥ್, ಪಿಳ್ಳಪ್ಪ, ರಾಜಶೇಖರ್, ಮಂಜುನಾಥ್, ವೆಂಕಟೇಶಪ್ಪ, ಬೀರಮ್ಮ, ನಾರಾಯಣಮ್ಮ, ಲಕ್ಷ್ಮೀದೇವಮ್ಮ, ಶಾಂತಮ್ಮ, ವೆಂಕಟಮ್ಮ, ವಂಶಿ ಮತ್ತು ರೋಜಾ ವಿವಿಧ ಪಕ್ಷ ತೊರೆದು ಕೆಎಂಕೆ ಟ್ರಸ್ಟ್‌ನ ಅಧ್ಯಕ್ಷ ವೇಣುಗೋಪಾಲ್ ಹೂಮಾಲೆ ಹಾಕಿ ತಮ್ಮ ಬಣಕ್ಕೆ ಬರಮಾಡಿಕೊಂಡರು.