ಬಾಗಲಕೋಟೆ: ಕ್ರೀಡೆಗಳ ಪ್ರೋತ್ಸಾಹ ಹಾಗೂ ಉತ್ತೇಜನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದ್ದಾರೆ.
ನಗರದ ಬಿವಿವಿ ಸಂಘದ ಬಸವೇಶ್ವರ ಮೈದಾನದಲ್ಲಿ ಬಾಗಲಕೋಟೆ ಜಿಲ್ಲಾ ಕಾನಿಪ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ, ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ, ಸೌಲಭ್ಯ ನೀಡುವ ಮೂಲಕ ದೇಶದ ಕ್ರೀಡಾಪಟುಗಳು ವಿಶ್ವ ಮಟ್ಟದಲ್ಲಿ ಸಾಧನೆಗೈದು ದೇಶದ ಕೀರ್ತಿಹೆಚ್ಚಿಸಿದ್ದಾರೆ ಎಂದರು.
ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಅದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಹಾಗೂ ಅವುಗಳಿಗೆ ಉತ್ತೇಜನ ನೀಡುವದು, ಬೆಳೆಸುವದು ಇಂದು ಅಗತ್ಯವಾಗಿದೆ. ಕ್ರೀಡೆಗಳಿಂದ ದೈಹಿಕ, ಮಾನಸಿಕವಾಗಿ ನೆಮ್ಮದಿಯ ಜತೆಗೆ ಉತ್ತಮ ಆರೋಗ್ಯ ಸಾಧ್ಯ, ಈ ದಿಸೆಯಲ್ಲಿ ಪತ್ರಕರ್ತರು ಆಯೋಜಿಸುತ್ತಿರುವ ಕ್ರೀಡಾಕೂಟ ಶ್ಲಾಘನೀಯ ಎಂದು ಪತ್ರಕರ್ತ ತಂಡಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡ ಜಿ. ವೆಂಕಟೇಶ ಅವರನ್ನು ಜಿಲ್ಲಾ ಕಾನಿಪ
ಸಂಘದಿಂದ ಶಾಸಕ ಡಾ|ವೀರಣ್ಣ ಚರಂತಿಮಠ ಅವರನ್ನು ಸನ್ಮಾನಿಸಿದರು. ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ಧಲಬಂಜನ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಕ್ರೀಡಾಕೂಟವನ್ನಆರ್.ಎಂ. ಸಗರ, ಉದಯ ಅಂಗಡಿ, ಎಸ್.ಜಿ. ಉಜ್ವಲ, ಸಂಗಮ ರಾಠಿ, ಶ್ರೀಶೈಲ ಹೊನಿ, ಮಂಜುನಾಥ ಅವರು ಉಸ್ತುವಾರಿ ವಹಿಸಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಈಶ್ವರ ಶೆಟ್ಟರ, ರಾಜ್ಯ ಕಾನಿಪ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾನಿಪ ಉಪಾಧ್ಯಕ್ಷ ಉಮೇಶ ಪೂಜಾರ, ಪ್ರಧಾನ ಕಾರ್ಯದರ್ಶಿ ಶಂಕರ ಎಸ್. ಕಲ್ಯಾಣಿ, ಶಶಿಕುಮಾರ ಕೆರೂರ, ಶಂಕರ ಹೂಗಾರ, ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು. ಪ್ರಕಾಶ ಬಾಳಕ್ಕನ್ನವರ ನಿರೂಪಿಸಿದರು. ಪ್ರಕಾಶ ಗುಳೇದಗುಡ್ಡ ಸ್ವಾಗತಿಸಿ, ವಂದಿಸಿದರು.