Advertisement

ಮತ್ತೆ ರಶೀದ್‌ ದಾಳಿಗೆ ತತ್ತರಿಸಿದ ಬಾಂಗ್ಲಾ

06:45 AM Jun 07, 2018 | Team Udayavani |

ಡೆಹ್ರಾಡೂನ್‌: ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಮತ್ತೆ ಘಾತಕವಾಗಿ ಪರಿಣಮಿಸಿದ್ದಾರೆ. ಬಾಂಗ್ಲಾದೇಶ ಎದುರಿನ ಟಿ20 ಸರಣಿ ಜಯದಲ್ಲಿ ಪ್ರಧಾನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಮಂಗಳವಾರ ರಾತ್ರಿ ಡೆಹ್ರಾಡೂನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ಥಾನ 6 ವಿಕೆಟ್‌ಗಳಿಂದ ಬಾಂಗ್ಲಾವನ್ನು ಮಣಿಸಿ ಸರಣಿ ವಶಪಡಿಸಿಕೊಂಡಿತು. 3 ಪಂದ್ಯಗಳ ಸರಣಿಯಲ್ಲೀಗ ಅಫ್ಘಾನ್‌ 2 0 ಮುನ್ನಡೆಯಲ್ಲಿದೆ.
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ 8 ವಿಕೆಟಿಗೆ 134 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಅಫ್ಘಾನಿಸ್ಥಾನ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 135 ರನ್‌ ಬಾರಿಸಿ ವಿಜಯಿಯಾಯಿತು. 4 ಓವರ್‌ಗಳ ಕೋಟಾದಲ್ಲಿ ಕೇವಲ 12 ರನ್‌ ನೀಡಿದ ರಶೀದ್‌ ಖಾನ್‌ 4 ವಿಕೆಟ್‌ ಉಡಾಯಿಸಿ ಮೆರೆದರು. ಸತತ 2ನೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಫ್ಘಾನ್‌ ಅಮೋಘ ಬ್ಯಾಟಿಂಗ್‌
ಅಫ್ಘಾನ್‌ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದವರು ಸಮಿಯುಲ್ಲ ಶೇನ್ವರಿ ಮತ್ತು ಮೊಹಮ್ಮದ್‌ ನಬಿ. ಶೇನ್ವರಿ 41 ಎಸೆತಗಳಿಂದ 49 ರನ್‌ ಬಾರಿಸಿದರೆ (2 ಬೌಂಡರಿ, 3 ಸಿಕ್ಸರ್‌), ನಬಿ ಅಜೇಯ 31 ರನ್‌ ಹೊಡೆದರು (15 ಎಸೆತ, 3 ಬೌಂಡರಿ, 2 ಸಿಕ್ಸರ್‌). ಮೊಹಮ್ಮದ್‌ ಶಾಜಾದ್‌ (24) ಉಸ್ಮಾನ್‌ ಗನಿ (21) ಜೋಡಿಯಿಂದ ಉತ್ತಮ ಆರಂಭ ಲಭಿಸಿತು. ಇವರು ಮೊದಲ ವಿಕೆಟಿಗೆ 5.4 ಓವರ್‌ಗಳಿಂದ 38 ರನ್‌ ಹೊಡೆದರು.

ಬಾಂಗ್ಲಾ ಬ್ಯಾಟಿಂಗ್‌ ವೇಳೆ ಓಪನರ್‌ ತಮಿಮ್‌ ಇಕ್ಬಾಲ್‌ ಸರ್ವಾಧಿಕ 43 ರನ್‌ ಹೊಡೆದರೆ (48 ಎಸೆತ, 5 ಬೌಂಡರಿ), ಮುಶ್ಫಿಕರ್‌ ರಹೀಂ 22 ಮತ್ತು ಅಬು ಹೈದರ್‌ 21 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟಿಗೆ 134 (ತಮಿಮ್‌ 43, ರಹೀಂ 22, ಹೈದರ್‌ 21, ರಶೀದ್‌ 12ಕ್ಕೆ 4, ನಬಿ 19ಕ್ಕೆ 2). ಅಫ್ಘಾನಿಸ್ಥಾನ 18.5 ಓವರ್‌ಗಳಲ್ಲಿ 4 ವಿಕೆಟಿಗೆ 135 (ಶೇನ್ವರಿ 49, ನಬಿ 31, ಶಾಜಾದ್‌ 24, ಮೊಸದ್ದೆಕ್‌ 21ಕ್ಕೆ 2). ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next