Advertisement
ಹುಲ್ಲಿನಂಗಳದಲ್ಲಿ ಕಳಪೆ ದಾಖಲೆ ಹೊಂದಿರುವ ಸ್ಟೀಫನ್ಸ್ ಅವರನ್ನು ವಿಶ್ವದ 55ನೇ ರ್‍ಯಾಂಕಿಂಗ್ ಆಟಗಾರ್ತಿ ಕ್ರೊವೇಶಿಯದ ಡೋನಾ ವೆಕಿಕ್ 6-1, 6-3 ನೇರ ಸೆಟ್‌ಗಳಿಂದ ಮಣಿಸಿದರು. ಈವರೆಗೆ 6 ವಿಂಬಲ್ಡನ್ ಕೂಟಗಳಲ್ಲಿ ಪಾಲ್ಗೊಂಡಿರುವ 25ರ ಹರೆಯದ ಸ್ಟೀಫನ್ಸ್ ಒಮ್ಮೆಯಷ್ಟೇ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷವೂ ಇಲ್ಲಿ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. ಮೊನ್ನೆಯ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ರನ್ನರ್ ಅಪ್‌ಗೆ ಸಮಾಧಾನಪಟ್ಟಿದ್ದರು.
ಕಳೆದ ವರ್ಷ ಫೈನಲ್‌ಗೆ ಲಗ್ಗೆ ಇರಿಸಿ ಫೆಡರರ್ ವಿರುದ್ಧ ಎಡವಿದ್ದ ಕ್ರೊವೇಶಿಯದ ಮರಿನ್ ಸಿಲಿಕ್ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ ಜಪಾನಿನ ಯೊಶಿಹಿಟೊ ನಿಶಿಯೋಕ ಅವರನ್ನು 6-1, 6-4, 6-4ರಿಂದ ಮಣಿಸಿ 2ನೇ ಸುತ್ತು ಪ್ರವೇಶಿಸಿದರು. ಆದರೆ ಹಾಲೆ ಚಾಂಪಿಯನ್ ಬೋರ್ನ ಕೊರಿಕ್ ಆಟ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ. ಅವರನ್ನು ಡ್ಯಾನಿಲ್ ಮೆಡ್ವಡೇವ್ 7-6 (6), 6-2, 6-2 ಅಂತರದಿಂದ ಹಿಮ್ಮೆಟ್ಟಿಸಿದರು.
Related Articles
9ನೇ ವಿಂಬಲ್ಡನ್ ಪ್ರಶಸ್ತಿ ಮೇಲೆ ಕಣ್ಣಿರಿಸಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ. ಸರ್ಬಿಯಾದ ದುಸಾನ್ ಲಾಜೋವಿಕ್ ವಿರುದ್ಧ ಅವರು 6-1, 6-3, 6-4 ಅಂತರದ ಜಯ ಒಲಿಸಿಕೊಂಡರು. ಇದು ಫೆಡರರ್ ಆಡುತ್ತಿರುವ ಸತತ 20ನೇ ವಿಂಬಲ್ಡನ್ ಪಂದ್ಯಾವಳಿ ಎಂಬುದೊಂದು ಹೆಗ್ಗಳಿಕೆ.
Advertisement