Advertisement

ಜಾರಿ ಬಿದ್ದು ಪಂದ್ಯಾವಳಿಯಿಂದ ಹೊರನಡೆದ ಸೆರೆನಾ ವಿಲಿಯಮ್ಸ್‌ , ಅಡ್ರಿಯನ್‌ ಮುನ್ನಾರಿನೊ

10:55 PM Jun 30, 2021 | Team Udayavani |

ಲಂಡನ್‌ : 24ನೇ ಗ್ರಾನ್‌ಸ್ಲಾಮ್‌ ಮತ್ತು 8ನೇ ವಿಂಬಲ್ಡನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ತಾರಾ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಕನಸು ಮತ್ತೂಮ್ಮೆ ಭಗ್ನವಾಗಿದೆ. ಮೊದಲ ಸುತ್ತಿನ ಪಂದ್ಯದ ವೇಳೆ ಜಾರಿ ಬಿದ್ದು, ಎಡಗಾಲಿನ ನೋವಿಗೆ ಸಿಲುಕಿ ಕೂಟದಿಂದ ಹೊರಬಿದ್ದಿದ್ದಾರೆ.

Advertisement

ಸೆಂಟರ್‌ ಕೋರ್ಟ್‌ನಲ್ಲಿ ಬೆಲರೂಸ್‌ನ ಅಲೆಕ್ಸಾಂಡ್ರಾ ಸಾನ್ಸೋವಿಕ್‌ ವಿರುದ್ಧದ ಪಂದ್ಯದ ವೇಳೆ ಸೆರೆನಾ ಮೈದಾನದಲ್ಲೇ ಜಾರಿ ಬಿದ್ದು ಗಾಯಕ್ಕೊಳಗಾದರು. ಆಗ ಪಂದ್ಯ 3-3 ಸಮಬಲದಲ್ಲಿತ್ತು. ಗ್ರಾನ್‌ಸ್ಲಾಮ್‌ +ಇತಿಹಾಸದಲ್ಲಿ ಸೆರೆನಾ ಮೊದಲ ಸುತ್ತಿನಲ್ಲೇ ಹೊರಬಿದ್ದ 2ನೇ ನಿದರ್ಶನ ಇದಾಗಿದೆ.

ಮುನ್ನಾರಿನೊಗೂ ಕಾಡಿದ ಮೈದಾನ
8 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ರೋಜರ್‌ ಫೆಡರರ್‌ ಕೂಡ ವಾಕ್‌ ಓವರ್‌ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರಾನ್ಸ್‌ನ ಎದುರಾಳಿ ಅಡ್ರಿಯನ್‌ ಮುನ್ನಾರಿನೊ ಮೈದಾನದಲ್ಲೇ ಜಾರಿ ಬಿದ್ದು ಗಾಯಕ್ಕೀಡಾಗಿ ಹೊರನಡೆದ ಕಾರಣ ಫೆಡರರ್‌ ಮುನ್ನಡೆ ಸಾಧಿಸಿದರು. ಆಗ 4 ಸೆಟ್‌ಗಳ ಫೈಟ್‌ ಮುಗಿದಿದ್ದು, ಪಂದ್ಯ 2-2 ಸಮಬಲದಲ್ಲಿತ್ತು.

ಇದನ್ನೂ ಓದಿ :ವಿಂಬಲ್ಡನ್‌ ಪಂದ್ಯಾಟ : ಮೂರನೇ ಸುತ್ತಿಗೇರಿದ ನೊವಾಕ್‌ ಜೊಕೋವಿಕ್‌

Advertisement

Udayavani is now on Telegram. Click here to join our channel and stay updated with the latest news.

Next