Advertisement
ಅಲೆಕ್ಸಾಂಡರ್ ಜ್ವೆರೇವ್ ಯುಕೆಯ ಕ್ಯಾಮರಾನ್ ನೂರಿ ವಿರುದ್ಧ 6-4, 6-4, 7-6 (17-15) ಅಂತರದಿಂದ, ಅಮೆರಿಕದ ಬೆನ್ ಶೆಲ್ಟನ್ ಕೆನಡಾದ ಡೆನ್ನಿಸ್ ಶಪೊವಲೋವ್ ಅವರನ್ನು 6-7 (4-7), 6-2, 6-4, 4-6, 6-2 ಅಂತರದಿಂದ ಗೆದ್ದು ಬಂದರು.
Related Articles
Advertisement
ರಾಡುಕಾನು, ಬಡೋಸಾ ಜಯ:
ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ಎಮ್ಮಾ ರಾಡುಕಾನು, ಪೌಲಾ ಬಡೋಸಾ, ಕೊಕೊ ಗಾಫ್ ವನಿತಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬ್ರಿಟನ್‌ನ ಎಮ್ಮಾ ರಾಡುಕಾನು ಗ್ರೀಕ್‌ನ ಮರಿಯಾ ಸಕ್ಕರಿ ವಿರುದ್ಧ 6-2, 6-3 ಅಂತರದ ಸುಲಭ ಜಯ ಒಲಿಸಿಕೊಂಡರು. ಇದು 2021ರ ಯುಎಸ್ ಓಪನ್ ಸೆಮಿಫೈನಲ್ ಬಳಿಕ ಇವರಿಬ್ಬರ ನಡುವಿನ ಮೊದಲ ಮುಖಾಮುಖೀ ಆಗಿತ್ತು. ರಾಡುಕಾನು ಅವರ ಮುಂದಿನ ಎದುರಾಳಿ ನ್ಯೂಜಿಲ್ಯಾಂಡ್‌ನ ಅರ್ಹತಾ ಆಟಗಾರ್ತಿ ಲುಲು ಸುನ್.
ಸ್ಪೇನ್‌ನ ಪೌಲಾ ಬಡೋಸಾ ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ ಭಾರೀ ಹೋರಾಟ ನಡೆಸಿ 7-6 (6), 4-6, 6-4ರಿಂದ ಗೆದ್ದು ಬಂದರು. ಕಸತ್ಕಿನಾ ಈಸ್ಟ್‌ಬೋರ್ನ್ ಪಂದ್ಯಾವಳಿಯ ಚಾಂಪಿಯನ್ ಆಗಿದ್ದರು.
ಅಮೆರಿಕದ ಕೊಕೊ ಗಾಫ್ ಬ್ರಿಟನ್‌ನ ಅರ್ಹತಾ ಆಟಗಾರ್ತಿ ಸೋನಾಯ್ ಕಾರ್ಟಲ್ ಅವರಿಗೆ 6-4, 6-0 ಅಂತರದ ಸೋಲುಣಿಸಿದರು. ಅಮೆರಿಕದವರೇ ಆದ ಎಮ್ಮಾ ನವಾರೊ ಇವರ ಮುಂದಿನ ಎದುರಾಳಿ. ನವಾರೊ ರಷ್ಯಾದ ಡಯಾನಾ ಶ್ನೆ„ಡರ್ ವಿರುದ್ಧ ಜಯ ಸಾಧಿಸಿದ್ದರು.
ಭಾಂಬ್ರಿ ಜೋಡಿ ಪರಾಭವ:
ಭಾರತದ ಯುಕಿ ಭಾಂಬ್ರಿ ಹಾಗೂ ಫ್ರಾನ್ಸ್‌ನ ಅಲ್ಫಾನೊ ಒಲಿವೆಟ್ಟಿ ವಿಂಬಲ್ಡನ್ ಪುರುಷರ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದರು. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಜರ್ಮನಿಯ ಕೆವಿನ್ ಕ್ರಾವೀಟ್ಜ್-ಟಿಮ್ ಪ್ಯೂಟ್ಜ್ 4-6, 6-4, 6-3ರಿಂದ ಭಾಂಬ್ರಿ-ಒಲಿವೆಟ್ಟಿ ಜೋಡಿಯನ್ನು ಮಣಿಸಿದರು.