Advertisement

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌: ಕಿರ್ಗಿಯೋಸ್‌, ಸಿಸಿಪಸ್‌ ಗೆಲುವು

09:34 PM Jun 30, 2022 | Team Udayavani |

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌, ಗ್ರೀಸ್‌ನ ಸ್ಟೆಫ‌ನಸ್‌ ಸಿಸಿಪಸ್‌ 3ನೇ ಸುತ್ತಿಗೆ ಮುನ್ನಡೆದಿದ್ದಾರೆ. ಆದರೆ ಬ್ರಿಟನ್ನಿನ ಹಿರಿಯ ಆಟಗಾರ ಆ್ಯಂಡಿ ಮರ್ರೆ ಆಟ ಮುಗಿಸಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಪೆಟ್ರಾ ಕ್ವಿಟೋವಾ, ಮರಿಯಾ ಸಕ್ಕರಿ, ಆ್ಯಂಜೆಲಿಕ್‌ ಕೆರ್ಬರ್‌ ದ್ವಿತೀಯ ಸುತ್ತು ದಾಟಿದ್ದಾರೆ.

Advertisement

ನಿಕ್‌ ಕಿರ್ಗಿಯೋಸ್‌ ಸರ್ಬಿಯಾದ ಫಿಲಿಪ್‌ ಕ್ರಾಜಿನೋವಿಕ್‌ ಅವರನ್ನು 6-2, 6-3, 6-1 ನೇರ ಸೆಟ್‌ಗಳಲ್ಲಿ ಮಣಿಸಿದರು. ಸಿಸಿಪಸ್‌ ಆಸ್ಟ್ರೇಲಿಯದ ಜೋರ್ಡನ್‌ ಥಾಮ್ಸನ್‌ ವಿರುದ್ಧ 6-2, 6-3, 7-5ರಿಂದ ಗೆದ್ದು ಬಂದರು. ಆ್ಯಂಡಿ ಮರ್ರೆ ಅವರನ್ನು ಅಮೆರಿಕದ ಜಾನ್‌ ಇಸ್ನರ್‌ ಭಾರೀ ಹೋರಾಟದ ಬಳಿಕ 6-4, 7-6 (7-4), 6-3 (3-7), 6-4 ಅಂತರದಿಂದ ಹಿಮ್ಮೆಟ್ಟಿಸಿದರು. ಅಮೆರಿಕದ ಟೇಲರ್‌ ಫ್ರಿಟ್ಸ್‌, ಫ್ರಾನ್ಸ್‌ನ ರಿಚರ್ಡ್‌ ಗಾಸ್ಕ್ವೆಟ್‌ ಕೂಡ 3ನೇ ಸುತ್ತು ಪ್ರವೇಶಿಸಿದ್ದಾರೆ.

ವನಿತೆಯರ ಸಿಂಗಲ್ಸ್‌ನಲ್ಲಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ರೊಮೇನಿಯಾದ ಅನಾ ಬೋಗ್ಡಾನಾ ಅವರನ್ನು 6-1, 7-6 (7-5)ರಿಂದ ಸೋಲಿಸಿದರು.

ಸಾನಿಯಾಗೆ ಸೋಲು :

ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಜೆಕ್‌ ಗಣರಾಜ್ಯದ ರೂಸಿ ರಡೆಕಾ ಜೋಡಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದೆ. ಇವರನ್ನು ಮಾಗ್ಡಲೆನಾ ಫ್ರೆಕ್‌ (ಪೋಲೆಂಡ್‌)-ಬೀಟ್ರೋಝ್ ಹದ್ದಾದ್‌ (ಬ್ರಝಿಲ್‌) 4-6, 6-4, 6-2ರಿಂದ ಮಣಿಸಿದರು.

Advertisement

ಅಗುಟ್ಗೆ ಕೊರೊನಾ :

ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್‌ ಕೊರೊನಾ ಪಾಸಿಟಿವ್‌ ಬಂದುದರಿಂದ ವಿಂಬಲ್ಡನ್‌ನಿಂದ ಹಿಂದೆ ಸರಿದರು. ಕೋವಿಡ್‌ ಕಾರಣಕ್ಕಾಗಿ ವಿಂಬಲ್ಡನ್‌ನಿಂದ ಹೊರಗುಳಿದವರ ಸಂಖ್ಯೆ 3ಕ್ಕೆ ಏರಿತು. ಮರಿನ್‌ ಸಿಲಿಕ್‌, ಮ್ಯಾಟಿಯೊ ಬರೆಟಿನಿ ಉಳಿದಿಬ್ಬರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next