Advertisement
“ಸೆಂಟರ್ ಕೋರ್ಟ್’ನಲ್ಲಿ ನಡೆದ ಮುಖಾಮುಖೀ ಯಲ್ಲಿ ಆ್ಯಶ್ಲಿ ಬಾರ್ಟಿ ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-3, 7-5 ಅಂತರದ ಗೆಲುವು ಒಲಿಸಿಕೊಂಡರು. ಇವರಿಬ್ಬರು ಮುಖಾಮುಖೀಯಾದ ಮೊದಲ ನಿದರ್ಶನ ಇದಾಗಿದೆ.
ಸೋಮವಾರದ ಸೆಣಸಾಟದಲ್ಲಿ ಬಾರ್ಟಿ ಮತ್ತೋರ್ವ ಜೆಕ್ ಆಟಗಾರ್ತಿ ಬಾಬೊìರಾ ಕ್ರೆಜಿಕೋವಾ ಅವರನ್ನು ಎದುರಿಸಲಿದ್ದಾರೆ. ಕ್ರೆಜಿಕೋವಾ ಸತತ 15 ಸಿಂಗಲ್ಸ್ ಪಂದ್ಯಗಳನ್ನು ಜಯಿಸಿದ್ದು, ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಚಾಂಪಿಯನ್ ಕೂಡ ಆಗಿದ್ದಾರೆ. ಹೀಗಾಗಿ ಈ ಪಂದ್ಯ ಟೆನಿಸ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಾರ್ಬೊರಾ ಕ್ರೆಜಿಕೋವಾ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ ವಿರುದ್ಧ ಭಾರೀ ಹೋರಾಟ ನಡೆಸಿ 7-6 (7-1), 3-6, 7-5 ಅಂತರದಿಂದ ಗೆದ್ದು ಬಂದರು.
Related Articles
ವನಿತಾ ಡಬಲ್ಸ್‌ನಲ್ಲಿ ಹೋರಾಟ ಕೊನೆಗೊಳಿಸಿದ ಕೆಲವೇ ಗಂಟೆಗಳಲ್ಲಿ ರೋಹನ್ ಬೋಪಣ್ಣ ಜತೆಗೂಡಿ ಮಿಶ್ರ ಡಬಲ್ಸ್ ದ್ವಿತೀಯ ಸುತ್ತಿನ ಪಂದ್ಯವನ್ನು ಆಡಲಿಳಿದ ಸಾನಿಯಾ ಮಿರ್ಜಾಗೆ ಗೆಲುವು ಒಲಿದಿದೆ. ಭಾರತೀಯ ಜೋಡಿಯೀಗ 3ನೇ ಸುತ್ತು ಪ್ರವೇಶಿಸಿದೆ.
Advertisement
“ಕೋರ್ಟ್ ನಂ. 18’ರಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡಿದ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಆತಿಥೇಯ ನಾಡಿನ ಐಡನ್ ಮೆಕ್‌ಹಗ್-ಎಮಿಲಿ ವೆಬ್ಲಿ ಸ್ಮಿತ್ ವಿರುದ್ಧ 6-3, 6-1 ಅಂತರದ ಜಯ ಸಾಧಿಸಿದರು. ಮಂಗಳವಾರದ ತೃತೀಯ ಸುತ್ತಿನ ಸ್ಪರ್ಧೆಯಲ್ಲಿ ಇವರು ಆಂಡ್ರೆಜಾ ಕ್ಲೆಪಾಕ್ (ಸ್ಲೊವೇನಿಯಾ)-ಜೀನ್ ಜೂಲಿಯನ್ ರೋಜರ್ (ನೆದರ್ಲೆಂಡ್ಸ್) ವಿರುದ್ಧ ಸೆಣಸಲಿದ್ದಾರೆ.
ದಿವಿಜ್ ದಂಪತಿ ಪರಾಭವಮೊದಲ ಸಲ ವಿಂಬಲ್ಡನ್‌ನಲ್ಲಿ ಒಟ್ಟಿಗೇ ಕಣಕ್ಕಿಳಿದ ದಿವಿಜ್ ಶರಣ್-ಸಮಂತಾ ಮರ್ರೆ ದಂಪತಿಯ ಆಟ ಕೊನೆಗೊಂಡಿದೆ. ದ್ವಿತೀಯ ಸುತ್ತಿನ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ದಿಟ್ಟ ಪ್ರದರ್ಶನ ನೀಡಿದ ಹೊರತಾಗಿಯೂ ಡರಿಜಾ ಜುರಾಕ್ (ಕ್ರೊವೇಶಿಯಾ)-ರವೆನ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) ವಿರುದ್ಧದ ಪಂದ್ಯದಲ್ಲಿ ಅವರು 6-3, 6-7 (1-7), 3-6 ಅಂತರದಿಂದ ಪರಾಭವಗೊಂಡರು.