ವೆಲ್ಲಿಂಗ್ಟನ್: ಮಣಿಗಂಟಿನ ನೋವಿನಿಂದಾಗಿ ನಾಯಕ ಕೇನ್ ವಿಲಿಯಮ್ಸನ್ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ.
ಎಂದಿನಂತೆ ಟಾಮ್ ಲ್ಯಾಥಮ್ ನ್ಯೂಜಿಲ್ಯಾಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಬ್ಯಾಟ್ಸ್‌ಮನ್ ಹಾಮಿಶ್ ರುದರ್‌ಫೋರ್ಡ್, ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರನ್ನು ತಂಡಕ್ಕೆ ಮರಳಿ ಕರೆಸಲಾಗಿದೆ. ಕ್ಯಾಮ್ ಫ್ಲೆಚರ್ ಮತ್ತು ಬ್ಲೇರ್ ಟಿಕ್ನರ್ ಈ ತಂಡದ ಹೊಸ ಮುಖಗಳು. 3ನೇ ಮಗುವಿನ ನಿರೀಕ್ಷೆಯಲ್ಲಿರುವ ವೇಗಿ ಟ್ರೆಂಟ್ ಬೌಲ್ಟ್ ಲಭ್ಯರಿರುವುದಿಲ್ಲ. ರಾಸ್ ಟೇಲರ್ ನಿವೃತ್ತಿ ಬಳಿಕ ನ್ಯೂಜಿಲ್ಯಾಂಡ್ ಆಡಲಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್, ಪಾಟ್ನಾ ಪೈರೇಟ್ಸ್ ಗೆಲುವಿನ ಆಟ
ಫೆ. 17ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ನ್ಯೂಜಿಲ್ಯಾಂಡ್ ತಂಡ: ಟಾಮ್ ಲ್ಯಾಥಂ (ನಾಯಕ), ಟಾಮ್ ಬ್ಲಿಂಡೆಲ್, ಡೇವನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕ್ಯಾಮ್ ಫ್ಲೆಚರ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಹಾಮಿಶ್ ರುದರ್‌ಫೋರ್ಡ್, ಟಿಮ್ ಸೌಥಿ, ಬ್ಲೇರ್ ಟಿಕ್ನರ್, ನೀಲ್ ವ್ಯಾಗ್ನರ್, ವಿಲ್ ಯಂಗ್.