ಕೊಲ್ಲೂರು: ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾ ವಣೆಯ ಫಲಿತಾಂಶವು ಕಾಂಗ್ರೆಸ್-ಜೆಡಿಎಸ್ ಪರ ವಾಗಲಿದ್ದು ತನ್ನ ಗೆಲುವು ಖಚಿತ ಎಂದು ಮಧು ಬಂಗಾರಪ್ಪ ಹೇಳಿದರು.
ಕಟ್ಬೇಲೂರಿನಲ್ಲಿ ಶನಿವಾರ ಸಂಜೆ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು ಆದರೆ ಈ ಬಾರಿ ಪೂರ್ವ ಸಿದ್ಧತೆ ಯೊಂದಿಗೆ ಬೈಂದೂರು ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಪೂರ್ಣ ಬೆಂಬಲದೊಡನೆ ಚುನಾ ವಣೆಯನ್ನು ಎದುರುಸಿದ್ದೇನೆ. ಡಿ.ಕೆ. ಶಿವಕುಮಾರ್ ಸಹಿತ ಅನೇಕ ಹಿರಿಯ ಮುಖಂಡರು ಇಲ್ಲಿನ ಭಿನ್ನಾಭಿಪ್ರಾಯ ವನ್ನು ಶಮನಗೊಳಿಸಿದ್ದಾರೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಧು ಅವರ ಗೆಲುವು ನಿಶ್ಚಿತ ಎಂದರು. ಕಾಂಗ್ರೆಸ್ ಮುಖಂಡರಾದ ಮದನ್ ಕುಮಾರ್, ರಾಜು ಪೂಜಾರಿ, ಸಂಪಿಗೇಡಿ ಸಂಜೀವ ಶೆಟ್ಟಿ, ರಘುರಾಮ ಶೆಟ್ಟಿ, ಹಕೂìರು ಮಂಜಯ್ಯ ಶೆಟ್ಟಿ, ವಾಸುದೇವ ಯಡಿಯಾಳ, ಪಿ.ಎಲ್. ಜೋಶ್, ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿ ಸಿದರು. ವಾಸುದೇವ ಯಡಿಯಾಳ ವಂದಿಸಿದರು