ನವದೆಹಲಿ: ಮೊಬೈಲ್ ಬಳಕೆದಾರರು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಹೊಂದಿದ್ದರೆ, ಅಂತಹವರಿಗೆ ಇನ್ಮುಂದೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI), ಶನಿವಾರ (ಜೂನ್ 15) ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:RSS; ಭಾಗ್ವತ್ ‘ನಿಜವಾದ ಸೇವಕ’ ಹೇಳಿಕೆ ಮೋದಿ ಉದ್ದೇಶಿಸಿ ನೀಡಿದ್ದಲ್ಲ: ಸಂಘ ಸ್ಪಷ್ಟನೆ
“ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಹೊಂದಿರುವ ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಮಾಹಿತಿ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಇದು ಆಧಾರರಹಿತವಾದದ್ದು. ಇದು ಕೇವಲ ಸಾರ್ವಜನಿಕರನ್ನು ಹಾದಿ ತಪ್ಪಿಸುವ ಉದ್ದೇಶವಾಗಿದೆ” ಎಂದು ಟ್ರಾಯ್ ತಿಳಿಸಿದೆ.
ಸಮರ್ಪಕ ನಿರ್ವಹಣೆ, ದೂರಸಂಪರ್ಕ ಗುರುತಿಸುವಿಕೆಯ ಸಂಪನ್ಮೂಲಗಳ ಏಕೈಕ ಕಸ್ಟೋಡಿಯನ್ ಆಗಿರುವ ಟೆಲಿಕಮ್ಯೂನಿಕೇಶನ್ ಡಿಪಾರ್ಟ್ ಮೆಂಟ್ 2022ರ ಸೆಪ್ಟೆಂಬರ್ 29ರಂದು ಪರಿಷ್ಕೃತ ರಾಷ್ಟ್ರೀಯ ಸಂಖ್ಯಾ ಯೋಜನೆಗೆ ಅದರ ಶಿಫಾರಸು ಕೋರಿತ್ತು.
ಆದರೆ ಗ್ರಾಹಕರ ಮೇಲೆ ಯಾವುದೇ ಶುಲ್ಕ ವಿಧಿಸುವ ಬಗ್ಗೆ ಚರ್ಚೆಯಾಗಲಿ, ಶಿಫಾರಸು ಮಾಡಿಲ್ಲ ಟ್ರಾಯ್ ತಿಳಿಸಿದೆ. ಇದು ಜನರ ದಿಕ್ಕು ತಪ್ಪಿಸುವ ಸುಳ್ಳು ಮಾಹಿತಿಯಾಗಿದೆ. ಇಂತಹ ಸುದ್ದಿಯನ್ನು ಜನರು ನಂಬಬಾರದು ಎಂದು ಹೇಳಿದೆ.