Advertisement
ಲೋಕೋಪಯೋಗಿ ಇಲಾಖೆ ಯಿಂದ ತಾಂತ್ರಿಕ ಮಂಜೂರಾತಿ ಆದರೂ ಕಳೆದ 3 ತಿಂಗಳಿನಿಂದ ರಸ್ತೆ ಡಾಮರೀಕರಣ ಕಾಮಗಾರಿ ಇನ್ನೇನು ಆರಂಭಗೊಳ್ಳಬಹುದೆಂಬ ಗ್ರಾಮಸ್ಥರ ನಿರೀಕ್ಷೆ ಈವರೆಗೆ ಈಡೇರಲಿಲ್ಲ , ರಿûಾ ಚಾಲಕ ಮಾಲಕರು ಬಾಡಿಗೆಗೆ ಈ ಮಾರ್ಗವಾಗಿ ತೆರಳಲು ಮುಜುಗರ ಉಂಟಾಗುವಂತಹ ಭಾರೀ ಹೊಂಡಗಳಿಂದ ಕೂಡಿರುವ ಈ ರಸ್ತೆ ಇದೀಗ ಧೂಳುಮಯವಾಗಿ ಆಸುಪಾಸಿನ ನಿವಾಸಿಗಳಿಗೆ ರಸ್ತೆಯಲ್ಲಿ ಸಂಚರಿಸಲು ಕಷ್ಟಸಾಧ್ಯವಾಗಿದೆ.
ರಸ್ತೆ ವಿಸ್ತರೀಕರಣದೊಡನೆ ಕಾಂಕ್ರಿಟೀಕರಣದೊಡನೆ ರಸ್ತೆ ನಿರ್ಮಾಣ ಕಾಮಗಾರಿಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಶಿಫಾರಸಿನಂತೆ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ರಸ್ತೆ ವಿಸ್ತರೀಕರಣಕ್ಕೆ ಕೆಲವೊಂದು ಕಡೆ ಎದುರಾದ ಸಮಸ್ಯೆ ಕಾಮಗಾರಿಯ ವಿಳಂಬಕ್ಕೆ ಹೇತು ಎನ್ನಲಾಗಿದೆ. ಸ್ಥಳೀಯರು ಕರಾವಳಿಯ ಸಂಪರ್ಕ ರಸ್ತೆ ತ್ರಿಮೂರ್ತಿ ಸರ್ಕಲ್‌ವರೆಗೆ ಸಂಪೂರ್ಣ ಡಾಮರೀಕರಣ ರಸ್ತೆಯೇ ಲೇಸು ಎಂಬ ಅಭಿಪ್ರಾಯ ಹೊಂದಿದ್ದು ಜನಾಭಿಪ್ರಾಯವನ್ನು ಕ್ರೋಢೀಕರಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಲಿದೆ. ಹದಗೆಟ್ಟ ಕರಾವಳಿ ಮುಖ್ಯ ರಸ್ತೆ
ಬೀಜಾಡಿ-ಗೋಪಾಡಿ ಸಂಪರ್ಕ ಕೊಂಡಿಯಾಗಿರುವ ಕರಾವಳಿಯ ಮುಖ್ಯ ರಸ್ತೆಯ ಬೀಜಾಡಿ ತಿರುವಿನ ಅನೇಕ ಕಡೆ ಭಾರೀ ಹೊಂಡಗಳಿದ್ದು ನಿತ್ಯ ಪ್ರಯಾಣಿಕರ ಗೋಳು ಹೇಳ ತೀರದು. ದ್ವಿಚಕ್ರ ವಾಹನಗಳಲ್ಲಿ ಈ ಮಾರ್ಗವಾಗಿ ರಾತ್ರಿ ಸಂಚರಿಸುವವರಿಗೆ ಹೊಂಡದ ಪರಿಕಲ್ಪನೆ ಇಲ್ಲದಿದ್ದಲ್ಲಿ ಅಪಘಾತ ಕಟ್ಟಿಟ್ಟ$ ಬುತ್ತಿ. ಶಾಲಾ ಕಾಲೇಜು ವಾಹನ ಸಹಿತ ವಿವಿಧ ಉದ್ಯಮದಲ್ಲಿರುವವರು, ಮೀನುಗಾರರು, ಕಾರ್ಮಿಕರು, ಅಲ್ಲದೇ ಕರಾವಳಿಯ ಕೋಟದಿಂದ -ಕೋಡಿ ತನಕ ಅನೇಕ ಮಂದಿ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ಮಾರ್ಗವು ದುರಸ್ತಿಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಂಡಗಳೆದ್ದು ರಸ್ತೆ ರಾಡಿಯಾಗಲಿದೆ.
Related Articles
ನಿತ್ಯ ಪ್ರಯಾಣಿಕರ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಾಣ ಕಾಮಗಾರಿ ಅತೀ ಶೀಘ್ರದಲ್ಲೇ ನಡೆಯಬೇಕು, ಬೀಜಾಡಿ ರಸ್ತೆಯ ಸಂಪೂರ್ಣ ಡಾಮರೀಕರಣದ ಅಗತ್ಯ ಇದೆ.
– ಸುರೇಶ್ ಚಾತ್ರಬೆಟ್ಟು,ಬೀಜಾಡಿ
Advertisement
ಕಾಮಗಾರಿ ನಡೆಯಲಿದೆಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶಿಫಾರಸ್ಸಿನಂತೆ ಕುಂದಾಪುರ ಕೋಡಿಯಿಂದ- ಕೋಡಿ ಕನ್ಯಾಣದವರೆಗೆ ಆಯ್ದ ಪ್ರದೇಶಗಳಲ್ಲಿ ಕಾಂಕ್ರೀಟಿಕರಣ ಹಾಗೂ ಮಿಕ್ಕುಳಿದ ಪ್ರದೇಶಗಳಲ್ಲಿ ಡಾಮರೀಕರಣ ಕಾಮಗಾರಿ ನಡೆಯಲಿದೆ. ಕೋಡಿಯಲ್ಲಿ ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಉಳಿದ ಭಾಗಗಳಲ್ಲಿ ಕೂಡ ಕಾಮಗಾರಿ ನಡೆಯಲಿದ್ದು, ಲೋಕೋಪಯೋಗಿ ಇಲಾಖೆ ನೇತೃತ್ವ ವಹಿಸಿದೆ.
-ಶ್ರೀಲತಾ ಎಸ್.ಶೆಟ್ಟಿ,
ಜಿಲ್ಲಾ ಪಂಚಾಯತ್ ಸದಸ್ಯೆ, ಬೀಜಾಡಿ