Advertisement

ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆಯೇ ?

03:57 PM Jan 02, 2020 | Mithun PG |

ಮಣಿಪಾಲ: ರೈಲು ಪ್ರುಯಾಣ ದರ ಏರಿಕೆ ಬಳಿಕ ಸಬ್ಸಿಡಿ ರಹಿತ ಅಡುಗೆ ಅನಿಲ ದರದ ಬೆಲೆಯನ್ನು 19 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಕಳೆದೈದು ತಿಂಗಳಲ್ಲಿ ಇದು ಐದನೇಯ ಏರಿಕೆ. ಹೊಸ ವರ್ಷದ ದಿನದಂದೇ ಮಗದೊಮ್ಮೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಸಿರುವುದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಉದಯವಾಣಿ “ಹೊಸ ವರ್ಷದ ಪ್ರಾರಂಭದಲ್ಲೇ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದ್ದು ಈ ಕುರಿತಾಗಿ ನಿಮ್ಮ ಅಭಿಪ್ರಾಯವೇನು?” ಎಂಬ  ಪ್ರೆಶ್ನೆಯನ್ನು ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಂತಿವೆ.

Advertisement

ರಾಜೇಶ್ ಅಂಚನ್:  ಸಬ್ಸಿಡಿ ರಹಿತ ಅನಿಲ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ಅಂತಹ ಹೊರೆಯಾಗೋಲ್ಲ. ಜೊತೆಗೆ ಪೆಟ್ರೋಲಿಯಂ ದರ ವ್ಯತ್ಯಾಸ ನಿರಂತರವಾದ ಏರಿಳಿತವಿರುವುದರಿಂದ ಜನ ಸಾಮಾನ್ಯ ಅದಕ್ಕೆ ಹೊಂದಿಕೊಳ್ಳಲೇ ಬೇಕಾಗುತ್ತೆ. ಅದು ಅಂತಾರಾಷ್ಟ್ರೀಯ ಮಾರುಕಟ್ಟೆ ಆಧಾರಿತ. ಆದರೂ ಕೇಂದ್ರ ಸರ್ಕಾರ ಏರುತ್ತಿರುವ ದಿನಬಳಕೆ ವಸ್ತುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ್ದು ಅನಿವಾರ್ಯ.  ಖಾಸಗಿ ಉದ್ಯೋಗಿಗಳಿಗೆ ವೇತನ ಹೆಚ್ಚಳ ಇಲ್ಲದಿರುವ ಕಾರಣ ಅವರ ಜೇವನ ಸಂಕಷ್ಟಕ್ಕೆ ಗುರಿಯಾಗದಂತೆ ಸರ್ಕಾರ ಬೆಲೆಗಳ ನಿಯಂತ್ರಣ ಸಾಧಿಸಬೇಕು

ಭರತ್ ಕುಮಾರ್ ನಾಯ್ಕ್:  ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಮಾತ್ರ ಜಾಸ್ತಿಯಾಗಿರುವುದರಿಂದ , ಇದು ಜನಸಾಮಾನ್ಯರಿಗೆ ಹೊರೆ ಆಗುವುದಿಲಲ್ಲ.

ರಘು:  ಸಬ್ಸಿಡಿ ರಹಿತ ಅನಿಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧಾರಿತ.ಆದರೂ ಕೇಂದ್ರ ಸರ್ಕಾರ ಏರುತ್ತಿರುವ ದಿನಬಳಕೆ ವಸ್ತುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ್ದು ಅನಿವಾರ್ಯ. ಖಾಸಗಿ ಉದ್ಯೋಗಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next