Advertisement

ಪ್ರಸಕ್ತ ವರ್ಷವೂ ರಾಜ್ಯಕ್ಕೆ ಬರಸಿಡಿಲು?

02:35 AM Jul 11, 2017 | Harsha Rao |

ಬೆಂಗಳೂರು: ಇದುವರೆಗಿನ ಪರಿಸ್ಥಿತಿ ಗಮನಿಸಿದರೆ ಪ್ರಸಕ್ತ ವರ್ಷವೂ ಮಳೆ ಕೊರತೆ ಕಾಡುವ ಆತಂಕ ಕಾಣಿಸುತ್ತಿದ್ದು,
ಇನ್ನು 10 ದಿನ ಕಾದು ನೋಡಿ “ಬರ ಪೀಡಿತ’ ಎಂದು ಘೋಷಣೆ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಗಾರು ಶುರುವಾದಾಗಿನಿಂದ ಇದುವರೆಗೂ ಆಗಿರುವ ಮಳೆಯ ಪ್ರಮಾಣ ನೋಡಿದರೆ ತೀರಾ ಕಡಿಮೆ. ಹೀಗಾಗಿ ಇದೇ ಪರಿಸ್ಥಿತಿ ಮುಂದುವರಿದರೆ ಯೋಚಿಸಬೇಕಾಗುತ್ತದೆ. ರಾಜ್ಯವನ್ನು ಮತ್ತೆ ಬರಗಾಲ ಪೀಡಿತ ಎಂದು ಘೋಷಿಸಬೇಕಾಗುತ್ತದೆ ಎಂದು ಹೇಳಿದರು.

ಮೋಡ ಬಿತ್ತನೆಗೆ ಸರ್ಕಾರದಿಂದ 30 ಕೋಟಿ ರೂ. ಬಿಡುಗಡೆಯಾಗಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.
ದಕ್ಷಿಣ ಒಳನಾಡು ಮತ್ತು ಉತ್ತರ ಭಾಗದಲ್ಲಿ ಮಳೆಯ ಕೊರತೆ ಇದೆ. ಹೀಗಾಗಿ, ಮೋಡ ಬಿತ್ತನೆ ಅನಿವಾರ್ಯ ಎಂದು ಸಮರ್ಥಿಸಿಕೊಂಡರು. ಮಂಗಳವಾರದಿಂದ ಕಾವೇರಿ ನದಿ ವಿವಾದ ಪ್ರಕರಣಗಳ ವಿಚಾರಣೆ ನಡೆಯಲಿದ್ದು, ನಮ್ಮ ಪರ ವಕೀಲರು ವಾದ ಮಂಡಿಸಲು ಸಮರ್ಥರಿದ್ದಾರೆ.

ಎಲ್ಲ ರೀತಿಯಿಂದಲೂ ವಾದ ಮಂಡಿಸಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೈಸ್‌ ಸಂಸ್ಥೆಯು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ರಸ್ತೆಗಳಲ್ಲಿ ಟೋಲ್‌ ದರಗಳ ಹೆಚ್ಚಳ ಮಾಡುವಂತಿಲ್ಲ. ದರ ಹೆಚ್ಚಿಸುವ ಮುನ್ನ ನೈಸ್‌ ಸಂಸ್ಥೆ ಸರ್ಕಾರದ ಅನುಮತಿಯನ್ನೂ ಕೇಳಿಲ್ಲ. ಹೀಗಾಗಿ, ಸರ್ಕಾರ ದಿಂದ ನೋಟಿಸ್‌ ಜಾರಿ ಮಾಡಲಾಗಿದೆ. ಟೋಲ್‌ ದರಗಳ ಹೆಚ್ಚಳ ಕುರಿತು ಸ್ಪಷ್ಟನೆ ಕೇಳಲಾಗಿದೆ. ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ.
– ಟಿ.ಬಿ.ಜಯಚಂದ್ರ, ಕಾನೂನು ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next