Advertisement
ರೈತರ ಹಿತದೃಷ್ಟಿಯಿಂದ ಈಗಾಗಲೇ ಮರಳು ತುಂಬಿದ ಚೀಲ ಹಚ್ಚಿ ತಾತ್ಕಾಲಿಕ ಕಾಮಗಾರಿಯೂ ನಡೆಸಲಾಗಿದೆ. ನಾಲ್ಕು ದಿನಗಳಲ್ಲಿಯೇ ಪೂರ್ಣಗೊಳಿಸಲಾಗುತ್ತಿದೆ ಎಂದು ಇಂಜಿನಿಯರ್ ಗಳು ಹೇಳುತ್ತಿದ್ದಾರೆ. ಗುಣಮಟ್ಟದ ಮಣ್ಣು ಇಲ್ಲದೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಐಸಿಸಿ ಕಮಿಟಿಯಿಂದ ಪರಿಶೀಲಿಸಿದಾಗ ಮಣ್ಣು ಸರಿ ಇಲ್ಲ ಎಂದು ಮಾಹಿತಿ ನೀಡಿದ್ದರು. ಹಾಗಾಗಿ ಶಾಶ್ವತ ಕೆಲಸ ಆದಾಗಲೇ ಸಮಸ್ಯೆ ತಡೆಗಟ್ಟಬಹುದಾಗಿದೆ ಎನ್ನುತ್ತಿದ್ದಾರೆ ಇಂಜಿನಿಯರ್ ರವಿಕುಮಾರ.
Related Articles
Advertisement
ಮುಖ್ಯವಾಗಿ ಕಾಲುವೆಯ 62ರಿಂದ 68 ಕಿಮೀ ನಡುವೆ ಅಗ್ನಿ ಬಳಿಯೇ ಪದೇ ಪದೆ ಕಾಲುವೆ ಕುಸಿತಗೊಳ್ಳುತ್ತಿದೆ. 2014ರಲ್ಲಿ ಮತ್ತು 2015ರಲ್ಲಿ ಕುಸಿತಗೊಂಡ ನಂತರ 2017ರಲ್ಲಿ ಕುಸಿದಿತ್ತು. ಮತ್ತೆ 2020ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿದು ಅಧಿಕಾರಿಗಳ ನಿದ್ದೆ ಕೆಡಿಸಿತ್ತು. ಸದ್ಯ ಪ್ರಸಕ್ತ 2022ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿತಗೊಂಡಿದೆ. ಮೂರು ಬಾರಿ ಸಂಬಂಧಿಸಿದ ಗುತ್ತಿಗೆದಾರರೇ ಕಾಲುವೆ ರಿಪೇರಿ ಮಾಡಿಸಿದ್ದಾರೆ. ಆದರೆ ನಾಲ್ಕನೆ ಬಾರಿ ಕೆಬಿಜೆಎನ್‌ಎಲ್ ನಿಗಮದ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಈಗಾ ಕುಸಿತ ಕಾಲುವೆ ತಾತ್ಕಾಲಿಕ ಕಾಮಗಾರಿ ಕೈಗೊಂಡಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಒಟ್ಟಾರೆ ಶಾಶ್ವತ ಪರಿಹಾರ ಹುಡಕಬೇಕು. ಪಕ್ಕದ ಸ್ಥಳದಲ್ಲಿ ಪರ್ಯಾಯ ಕಾಲುವೆ ಕಟ್ಟಿಂಗ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರು ಭೇಟಿ ನೀಡಲಿದ್ದಾರೆ. ನಂತರ ಪರಿಶೀಲಿಸಿ ಅವರ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ರವಿಕುಮಾರ, ಸಹಾಯಕ ಇಂಜಿನಿಯರ್, ಕೆಬಿಜೆಎನ್‌ಎಲ್ ವಿಭಾಗ-7, ಹುಣಸಗಿ
-ಬಾಲಪ್ಪ ಎಂ. ಕುಪ್ಪಿ