Advertisement

ದಕ್ಷಿಣ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ಎಚ್ಚರಿಕೆ

01:07 AM Jun 15, 2020 | Hari Prasad |

ಸಿಯೋಲ್‌: ಉತ್ತರ ಕೊರಿಯಾದ ಪ್ರಭಾವಿ ಮಹಿಳೆ, ಅಲ್ಲಿನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಸಹೋದರಿ ಕಿಮ್‌ ಯೊ ಜೊಂಗ್‌, ದಕ್ಷಿಣ ಕೊರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಬೆದರಿಕೆ ಹಾಕಿದ್ದಾರೆ.

Advertisement

‘ದಕ್ಷಿಣ ಕೊರಿಯಾಕ್ಕೆ ಹೊಂದಿಕೊಂಡಿರುವ ತಮ್ಮ ದೇಶದ ಗಡಿಭಾಗದಲ್ಲಿನ ಕೆಲವು ಪ್ರಾಂತ್ಯಗಳಲ್ಲಿ ಉತ್ತರ ಕೊರಿಯಾ ಸರಕಾರ ವಿರುದ್ಧ ಜನರನ್ನು ದಂಗೆಯೇಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಅಲ್ಲಿ ಸರಕಾರದ ವಿರುದ್ಧ ಕರಪತ್ರ ಹಂಚಲಾಗುತ್ತಿದೆ. ಇದನ್ನು ದಕ್ಷಿಣ ಕೊರಿಯಾ ಸರಕಾರವೇ ವ್ಯವಸ್ಥಿತವಾಗಿ ಮಾಡುತ್ತಿದೆ’ ಎಂದು ಆರೋಪಿಸಿರುವ ಜೊಂಗ್‌, ಇಂಥ ಪಿತೂರಿಯನ್ನು ದಕ್ಷಿಣ ಕೊರಿಯಾ ನಿಲ್ಲಿಸಬೇಕು, ಇಲ್ಲವಾದರೆ, ಅದರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next