ಚೆನ್ನೈ : ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವ ಬೇಡಿಕೆಯನ್ನು ದಕ್ಷಿಣದ ರಾಜ್ಯಗಳು ಮುಂದಿಡಲು ಯತ್ನಿಸಿದರೆ ಅದನ್ನು ನಾವು ಸ್ವಾಗತಿಸಿ ಬೆಂಬಲಿಸುವೆವು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
‘ದಕ್ಷಿಣದ ರಾಜ್ಯಗಳು ಉತ್ತರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸುತ್ತವೆ; ಆದರೆ ಇದಕ್ಕೆ ಅವು ಕೇಂದ್ರದಿಂದ ಪಡೆಯುವ ಪ್ರತಿಫಲ ನಗಣ್ಯವಾಗಿದೆ’ ಎಂದು ಎರಡು ದಾಕ್ಷಿಣಾತ್ಯ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ ಒಂದು ವಾರದೊಳಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರಿಂದ ಈ ವಿವಾದಾತ್ಮಕ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.
“ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವ ಬೇಡಿಕೆಯನ್ನು ದಕ್ಷಿಣದ ರಾಜ್ಯಗಳು ಮುಂದಿಡಲು ಯತ್ನಿಸಿದರೆ ಅಂತಹ ಪ್ರಯತ್ನವನ್ನು ನಾವು ಬೆಂಬಲಿಸುತ್ತೇನೆ; ಅಂತಹ ಒಂದು ಸನ್ನಿವೇಶ ಉದ್ಭವಾಗಲೆಂದು ನಾವು ಆಶಿಸುತ್ತೇವೆ’ ಎಂದು ಸ್ಟಾಲಿನ್ ಈರೋಡ್ ನಲ್ಲಿ ಹೇಳಿರುವುದಾಗಿ ‘ದ ಹಿಂದೂ’ ವರದಿ ಮಾಡಿದೆ.
‘ದಕ್ಷಿಣದ ರಾಜ್ಯಗಳು ಒಂದಾಗಿ ಮುಂದೆ ಬಂದು ಪ್ರತ್ಯೇಕ “ದ್ರಾವಿಡ ದೇಶ’ವನ್ನು ರೂಪಿಸುವ ದಿಶೆಯಲ್ಲಿ ಜನಮನದಲ್ಲಿ ಭಾವನೆಗಳು ತೀವ್ರಗೊಳ್ಳುತ್ತಿದೆಯೇ’ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ಟಾಲಿನ್ ಈ ರೀತಿಯ ಉತ್ತರ ನೀಡಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಶುಕ್ರವಾರ ಅಂಕಣವೊಂದರಲ್ಲಿ, ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳನ್ನು ಆರ್ಥಿಕವಾಗಿ ಪೋಷಿಸುತ್ತಿವೆ. ದಕ್ಷಿಣದ ರಾಜ್ಯಗಳು ಸಾಧಿಸುತ್ತಿರುವ ಅಭಿವೃದ್ಧಿಗೆ ಕೇಂದ್ರದಿಂದ ಯಾವುದೇ ಆರ್ಥಿಕ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಹೇಳಿದ್ದರು.
ಬಹುತೇಕ ಇದೇ ರೀತಿಯ ಅಭಿಪ್ರಾಯವನ್ನು ಆಂಧ್ರ ಮಾಜಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಆರ್ ವ್ಯಕ್ತಪಡಿಸಿದ್ದಾರೆ.
ಹಾಗಿದ್ದರೂ ಚರಿತ್ರೆಯತ್ತ ದೃಷ್ಟಿ ಹಾಯಿಸಿದರೆ
1962ರಷ್ಟು ಹಿಂದೆಯೇ ಡಿಎಂಕೆ ಪ್ರತ್ಯೇಕ ದೇಶದ ಬೇಡಿಕೆಯನ್ನು ಮುಂದಿಟ್ಟಿತ್ತು ಎನ್ನುವುದು ಗೊತ್ತಾಗುತ್ತದೆ.