ಹೊಸದಿಲ್ಲಿ: ಪಾಕಿಸ್ಥಾನದೊಂದಿಗೆ ಭಾರತ ಹೊಂದಿರುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲನೆ ಮಾಡುತ್ತಿದ್ದೇವೆ. ಪಾಕಿಸ್ಥಾನ ಭಯೋತ್ಪಾದನೆ ಬೆಂಬಲಿಸುತ್ತಿರುವುದರಿಂದ ನಾವು ಈ ಒಪ್ಪಂದಕ್ಕೆ ಬದ್ಧವಾಗಿ ಪಾಕ್‌ಗೆ ನೀರು ಹರಿಸಬೇಕಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪಾಕ್‌ಗೆ 3 ನದಿ ಗಳಿಂದ ನೀರು ಹರಿಯುತ್ತಿದೆ. ಎರಡೂ ದೇಶ ಗಳ ಮಧ್ಯೆ ಒಪ್ಪಂದ ನಡೆದಾಗ ಇದ್ದ ಸ್ನೇಹ ಹಾಗೂ ಶಾಂತಿ ಈಗ ಇಲ್ಲ. ಹೀಗಾಗಿ ಈ ಒಪ್ಪಂದಕ್ಕೆ ನಾವು ಬದ್ಧವಾಗುವ ಅಗತ್ಯವಿಲ್ಲ ಎಂದು ಗಡ್ಕರಿ ಹೇಳಿದ್ದಾರೆ. ಪಾಕ್ ನಿರಂ ತರವಾಗಿ ಉಗ್ರವಾದವನ್ನು ಬೆಂಬಲಿಸುತ್ತಿದ್ದರೆ, ನಮ್ಮ ಬಳಿ ಬೇರೆ ಯಾವ ಆಯ್ಕೆಯೂ ಇರುವುದಿಲ್ಲ. ಪಾಕ್‌ಗೆ ಹರಿಯುವ ನೀರನ್ನು ನಾವು ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನಕ್ಕೆ ತಿರುಗಿಸುತ್ತೇವೆ ಎಂದು ಗಡ್ಕರಿ ಹೇಳಿದ್ದಾರೆ. ಪುಲ್ವಾಮಾ ದಾಳಿ ನಂತರದಲ್ಲೂ ಈ ವಿಚಾರ ಭಾರಿ ಚರ್ಚೆಗೆ ಒಳಗಾಗಿತ್ತು. ಆಗಲೂ ಗಡ್ಕರಿ ಈ ವಿಚಾರವನ್ನು ಉಲ್ಲೇಖೀಸಿದ್ದರು.