Advertisement

ಪಾಕ್‌ನಲ್ಲಿ ಶಾರುಖ್‌ ಸಂಬಂಧಿ ಕಣಕ್ಕೆ

06:00 AM Jun 10, 2018 | Team Udayavani |

ಇಸ್ಲಾಮಾಬಾದ್‌: ಬಾಲಿವುಡ್‌ ನಟ ಶಾರುಖ್‌ ಖಾನ್‌ರ ಸಂಬಂಧಿ ನೂರ್‌ ಜಹಾನ್‌ ಪಾಕಿಸ್ತಾನದ ಚುನಾವಣೆಯಲ್ಲಿ ಪೇಶಾವರ್‌ನಿಂದ ಕಣಕ್ಕಿಳಿಯುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಶಾರುಖ್‌ ವಿರುದ್ಧ ಟೀಕೆಗಳು ಕೇಳಿಬಂದಿವೆ. ಶಾರುಖ್‌ ಪಾಕಿಸ್ತಾನಕ್ಕೆ ಹೋಗುತ್ತಾರೆಯೇ, ಅಲ್ಲಿಗೆ ಹೋಗಿಬಿಡಿ, ವಾಪಸ್‌ ಬರಬೇಡಿ ಎಂದೆಲ್ಲ ಟ್ವೀಟಿಗರು ಕುಟುಕಿದ್ದಾರೆ.

Advertisement

ನೂರ್‌ ಜಹಾನ್‌ರ ಸೋದರ ಮನ್ಸೂರ್‌ ಚುನಾವಣಾ ಪ್ರಚಾರ ಉಸ್ತುವಾರಿ ಹೊತ್ತಿದ್ದು, ನಮ್ಮ ಕುಟುಂಬ ಹಿಂದಿನಿಂದಲೂ ರಾಜಕೀಯ ನಂಟು ಹೊಂದಿದೆ. ನೂರ್‌ ಇದಕ್ಕೂ ಮೊದಲು ಕೌನ್ಸಿಲರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬವು 1929ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಖುದಾಯಿ ಖೀದ್ಮತ್‌ಗಾರ್‌ ಎಂಬ ಚಳವಳಿಯ ನೇತೃತ್ವವನ್ನು ವಹಿಸಿತ್ತು ಎಂದಿದ್ದಾರೆ.

ಮುಷರಫ್ ಮತ್ತೆ ಸ್ಪರ್ಧೆ: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರಫ್ ಕೂಡ ಜು. 25ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. 2013ರಲ್ಲಿ ಸುಪ್ರೀಂಕೋರ್ಟ್‌ ಆಜೀವ ಪರ್ಯಂತ ನಿಷೇಧ ಹೇರಿದ್ದರೂ, ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ನಾಮಪತ್ರ ಸಲ್ಲಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ.

ಹಫೀಜ್‌ ಪಕ್ಷ ಕಣಕ್ಕೆ: ಮುಂಬೈ ದಾಳಿಯ ಸಂಚುಕೋರ, ಉಗ್ರ ಹಫೀಜ್‌ ಸಯೀದ್‌ 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾನೆ. ಆದರೆ ತಾನು ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾನೆ. ಎಎಟಿ ಎಂಬ ನಿಷ್ಕ್ರಿಯ ಪಕ್ಷದ ಅಡಿಯಲ್ಲಿ ಜಮಾತ್‌ ಉದ್‌ ದಾವಾ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next