Advertisement

35ಎ ವಿಧಿಯ ಸಾಂವಿಧಾನಿಕ ಸಿಂಧುತ್ವ: ಇಂದು ಸುಪ್ರೀಂ ನಿರ್ಧಾರ

11:02 AM Oct 30, 2017 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಕರ್ಯಗಳನ್ನು ನೀಡುವ ಸಂವಿಧಾನದ 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ಒಂದು ಸಮೂಹದ ವಿಚಾರಣೆಯನ್ನು ಇಂದು ಸೋಮವಾರ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಕೈಗೆತ್ತಿಕೊಳ್ಳಲಿದೆ.

Advertisement

35ಎ ವಿಧಿಯನ್ನು 1954ರಲ್ಲಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಸಂವಿಧಾನಕ್ಕೆ ಸೇರಿಸಲಾಗಿತ್ತು. ಈ ವಿಧಿಯು ಜಮ್ಮು ಕಾಶ್ಮೀರ ವಿಧಾನಸಭೆಗೆ, ಸಂವಿಧಾನದ ಸಿಂಧುತ್ವವನ್ನು ಪ್ರಶ್ನಿಸಲಾಗದ ಶಾಸನಗಳನ್ನು ಜಾರಿ ಮಾಡುವ ಅಧಿಕಾರವನ್ನು ನೀಡುತ್ತದೆ.ಇಂತಹ ಶಾಸನಗಳು ಸಂವಿಧಾನದಡಿ ತಮಗಿರುವ ಸಮಾನತೆಯ ಅಥವಾ ಬೇರಾವುದೇ ಬಗೆಯ ಹಕ್ಕುಗಳ ಉಲ್ಲಂಘನೆಯಾಗುವಂತಿದೆ ಎಂದು  ದೇಶದ ಇತರ ಯಾವುದೇ ರಾಜ್ಯಗಳ ಜನರು ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ

35-ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದಿಲ್ಲಿಯಲ್ಲಿನ “ವೀ ದ ಸಿಟಿಜನ್ಸ್‌’ ಎಂಬ ಎನ್‌ಜಿಓ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ರಾಜ್ಯಕ್ಕೆ ನಿರ್ದಿಷ್ಟವಾದ ಕಾನೂನನ್ನು ಅನೂರ್ಜಿತಗೊಳಿಸಬೇಕು ಎಂದು ಈ ಎನ್‌ಜಿಓ ಒತ್ತಾಯಿಸಿದೆ. 

ಸುಪ್ರೀಂ ಕೋರ್ಟ್‌ ಒಂದೊಮ್ಮೆ ಅರ್ಜಿದಾರರ ಪರವಾಗಿ ತೀರ್ಪಿತ್ತರೆ ವ್ಯಾಪಕ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕಾಶ್ಮೀರೀ ಪ್ರತ್ಯೇಕತಾವಾದಿಗಳು ಈ ನಡುವೆ ಎಚ್ಚರಿಕೆ ನೀಡಿದ್ದಾರೆ. 

35-ಎ ವಿಧಿಯಲ್ಲಿ ಹಸ್ತಕ್ಷೇಪ ನಡೆಸುವ ಯಾವುದೇ ಯತ್ನಗಳು ಜಮ್ಮು ಕಾಶ್ಮೀರಕ್ಕೆ ಬಗೆಯುವ ದ್ರೋಹ ಎಂದು ಪ್ರತ್ಯೇಕತಾವಾದಿಗಳು ಎಚ್ಚರಿಕೆ ನೀಡಿದ್ದಾರೆ. 

Advertisement

ಕಾಶ್ಮೀರಿಗಳ ಹಿತಾಸಕ್ತಿ ಮತ್ತು ಆಶೋತ್ತರಗಳ ವಿರುದ್ಧ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸುವಂತೆ ಪ್ರತ್ಯೇಕವಾದಿ ನಾಯಕರಾಗಿರುವ ಸಯ್ಯದ್‌ ಅಲಿ ಷಾ ಗೀಲಾನಿ, ಮೀರ್‌ವೆàಜ್‌ ಉಮರ್‌ ಫಾರೂಕ್‌ ಮತ್ತು ಮೊಹಮ್ಮದ್‌ ಯಾಸಿನ್‌ ಮಲಿಕ್‌ ಅವರನ್ನು ಜನರನ್ನು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next