ಬೆಂಗಳೂರು: ಕೇಂದ್ರದ ಗೈಡ್ ಲೈನ್ ಪ್ರಕಾರ ಚಿತ್ರಮಂದಿರದಲ್ಲಿ ಶೇ. ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದೆ. ನಮ್ಮ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲು, ಐವತ್ತರಷ್ಟು ಮಾತ್ರ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಶೇ. 50ರರಷ್ಟು ಪ್ರೇಕ್ಷಕರಿಂದ ಥಿಯೇಟರ್ ನಡೆಸಲು ಸಾಧ್ಯವಿಲ್ಲ. ನೂರರಷ್ಟು ನೀಡಬೇಕು ಅಂತ ಒತ್ತಾಯ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ವಾಣಿಜ್ಯ ಮಂಡಳಿ ಜೊತೆ ಸಭೆ ಕರೆಯಲಾಗಿದೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಲಾಗುವುದು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಇದನ್ನೂ ಓದಿ: ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ: ಚಿತ್ರಮಂದಿರ ನೀತಿಯ ಬಗ್ಗೆ ಸಮರ್ಥನೆ ನೀಡಿದ ಸುಧಾಕರ್
ಸಿನಿಮಾ ಕೂಡ ನಡೆಯಬೇಕು, ವೀಕ್ಷಕರ ಆರೋಗ್ಯವೂ ಕಾಪಾಡಬೇಕು. ಒಂದು ವರ್ಷದಿಂದ ಈ ಸಮಸ್ಯೆ ಎದುರಾಗಿದೆ. ತಾತ್ಕಾಲಿಕವಾಗಿ ಈ ಕ್ರಮ ವಹಿಸಲಾಗಿದೆ. ಚಿತ್ರೋದ್ಯಮ ನಷ್ಟದಲ್ಲಿ ನಡೆಯುತ್ತಿದೆ. ವಾಣಿಜ್ಯ ಮಂಡಳಿಯಿಂದ ಸರ್ಕಾರವನ್ನು ಭೇಟಿ ಮಾಡಿದ್ದಾರೆ. ಶೀಘ್ರವೇ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ: ಚಿತ್ರೋದ್ಯಮಕ್ಕೆ ಯಾಕೆ ನಿರ್ಬಂಧ? ಸರ್ಕಾರವನ್ನು ಪ್ರಶ್ನಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್