ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ, ನಿರೂಪಕ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಹಾಲಿವುಡ್ ನ ಫಿಲ್ಮ್ ಅಕಾಡೆಮಿ, ಆಸ್ಕರ್ ಸೇರಿದಂತೆ ಯಾವುದೇ ಸಮಾರಂಭದಲ್ಲಿಯೂ ಪಾಲ್ಗೊಳ್ಳದಂತೆ 10 ವರ್ಷಗಳ ನಿಷೇಧ ಹೇರಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಷ್ಯಾ ಸೈನಿಕರ ಕೆಟ್ಟ ದೃಷ್ಠಿಯಿಂದ ತಪ್ಪಿಸಲು ಕೂದಲು ಕತ್ತರಿಸುತ್ತಿರುವ ಉಕ್ರೇನ್ ಹುಡುಗಿಯರು!
ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದ ವಿಲ್ ಸ್ಮಿತ್, ಕಾರ್ಯಕ್ರಮದ ದಿನ ವೇದಿಕೆಯಲ್ಲೇ ನಟ, ನಿರೂಪಕ ಕ್ರಿಸ್ ರಾಕ್ ಗೆ ಕಪಾಳಮೋಕ್ಷ ಮಾಡಿದ್ದರು. ಈ ತಪ್ಪಿಗಾಗಿ ತಾನು ಕ್ಷಮೆಯಾಚಿಸುವುದಾಗಿ ಸ್ಮಿತ್ ತಿಳಿಸಿದ್ದರು.
ಕ್ರಿಸ್ ರಾಕ್ ಗೆ ಕಪಾಳಮೋಕ್ಷ ಮಾಡಿದ್ದ ವಿಲ್ ಸ್ಮಿತ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಿವುಡ್ ಫಿಲ್ಮ್ ಅಕಾಡೆಮಿಯ ಗವರ್ವರ್ ಮಂಡಳಿ ಸ್ಮಿತ್ ಅವರನ್ನು ಇನ್ನು ಮುಂದಿನ ಹತ್ತು ವರ್ಷಗಳ ಕಾಲ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸದಿರುವಂತೆ ನಿಷೇಧ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದೆ.
ಸಿನಿಮಾ ಜಗತ್ತಿನಲ್ಲಿ ಆಸ್ಕರ್ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ. ಆಸ್ಕರ್ ಸೇರಿದಂತೆ ಇತರ ಎಲ್ಲಾ ಅಕಾಡಮಿಗಳ ಯಾವುದೇ ಕಾರ್ಯಕ್ರಮದಲ್ಲಿ ವರ್ಚುವಲಿ ಅಥವಾ ಭೌತಿಕವಾಗಿ ಹತ್ತು ವರ್ಷಗಳ ಕಾಲ ಭಾಗವಹಿಸುವಂತಿಲ್ಲ ಎಂದು ಆಸ್ಕರ್ ಫಿಲ್ಮ್ ಮಂಡಳಿ ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.