Advertisement

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

09:17 PM Mar 29, 2023 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಕೇಂದ್ರ ಸರಕಾರ ತಾರತಮ್ಯ ಧೋರಣೆ ಮಾಡುತ್ತಿದೆ ಎಂದುಎರಡು ದಿನಗಳ ಧರಣಿಯನ್ನು ಪ್ರಾರಂಭಿಸಿದ್ದು, ಅಗತ್ಯಬಿದ್ದರೆ ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ ಎಂದು ಹೇಳಿದ್ದಾರೆ.

Advertisement

”ನಾನು ಏಳು ಬಾರಿ ಸಂಸದೆಯಾಗಿ ಸೇವೆ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಹಲವು ಅವಧಿಗೆ ಸಚಿವೆಯಾಗಿದ್ದೆ. ಈಗ ಬಿಜೆಪಿ ನನಗೆ ಸಂವಿಧಾನದ ಬಗ್ಗೆ ಕಲಿಸುತ್ತಿದೆ. ಕೋಲ್ಕತಾದ ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರಿಗಾಗಿ ನಾನು ಧರಣಿ ಕುಳಿತೆ. ನನ್ನ ಬಳಿ ಡಬಲ್ ಪೋರ್ಟ್‌ಫೋಲಿಯೊ ಇದೆ. ನಾನೇನು ಮಾಡಲಿಕ್ಕಾಗುತ್ತದೆ? ನಾನು ಮುಖ್ಯಮಂತ್ರಿಯಾಗಿ, ನನ್ನ ಪಕ್ಷ ಅಧಿಕಾರದಲ್ಲಿದ್ದಾಗ ನನ್ನ ಜನರಿಗೆ ಹಣವನ್ನು ನಿಲ್ಲಿಸಲಾಗಿದೆ. ಭಾರತದಾದ್ಯಂತ ಜನರು ನನ್ನನ್ನು ಪ್ರೀತಿಸುತ್ತಾರೆ. ನನ್ನ ಪ್ರತಿಭಟನೆಯನ್ನು ಪ್ರಸಾರ ಮಾಡಬೇಡಿ ಎಂದು ಸುದ್ದಿ ವಾಹಿನಿಗಳಿಗೆ ತಿಳಿಸಲಾಗಿದೆ ಎಂದು ನಾನು ಕೇಳಿದೆ. ಬಿಜೆಪಿ ಪ್ರತಿ ಚಾನೆಲ್‌ಗೂ ಈ ಆದೇಶ ನೀಡಿದೆ. ಅಗತ್ಯವಿದ್ದರೆ ನಾನು ಪ್ರಧಾನಿ ಮನೆ ಬಳಿ ಕುಳಿತುಕೊಳ್ಳಬಹುದು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅಗತ್ಯವಿದ್ದರೆ, ಈ ಆಂದೋಲನವನ್ನು ದೆಹಲಿಗೆ ಕೊಂಡೊಯ್ಯಲು ನಾವು ಸಿದ್ಧರಿದ್ದೇವೆ. ಮಮತಾ ಬ್ಯಾನರ್ಜಿ ನಮಗೆ ಆದೇಶ ನೀಡಿದರೆ ನಾವು ದೆಹಲಿಗೆ ಮೆರವಣಿಗೆ ಮಾಡುತ್ತೇವೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next