Advertisement

ಕೇಜ್ರಿ ಭ್ರಷ್ಟಾಚಾರ ಸಾಬೀತಾದರೆ ಆತನ ಪದಚ್ಯುತಿಗೆ ನಿರಶನ: ಹಜಾರೆ

05:09 PM May 09, 2017 | udayavani editorial |

ಮುಂಬಯಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಬೀತಾದಲ್ಲಿ  ಆತನ ಪದಚ್ಯುತಿಯನ್ನು ಆಗ್ರಹಿಸಿ ನಾನು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದು ಕೇಜ್ರಿವಾಲ್‌ ಅವರ ಗುರು, ಭ್ರಷ್ಟಾಚಾರ ವಿರೋಧಿ ಆಂದೋಲನಕಾರ, ಖ್ಯಾತ ಸಮಾಜ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಗುಡುಗಿದ್ದಾರೆ. 

Advertisement

ಈ ಮೊದಲು ಕೇಜ್ರಿವಾಲ್‌ ಸರಕಾರದ ಪದಚ್ಯುತ ಸಚಿವ ಕಪಿಲ್‌ ಮಿಶ್ರಾ ಅವರು ಕೇಜ್ರಿವಾಲ್‌ ಭ್ರಷ್ಟಾಚಾರದ ಬಗ್ಗೆ ಮಾಡಿದ ಆರೋಪದಿಂದ “ನಾನು ದುಃಖೀತನಾಗಿದ್ದೇನೆ’ ಎಂದಷ್ಟೇ ಹೇಳಿದ್ದ ಹಜಾರೆ ಅವರು, “ನಾಯಕತ್ವದಿಂದ ಕಿತ್ತೂಗೆಯಲ್ಪಟ್ಟ ಬಳಿಕವೇ ಕಪಿಲ್‌ ಮಿಶ್ರಾ ಅವರ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದನ್ನು ಗಮನಿಸಬೇಕು’ ಎಂದು ಹೇಳಿದ್ದರು. 

ಅನಂತರದಲ್ಲಿ ತಮ್ಮ ನಿಲುವನ್ನು ಬಿಗುಗೊಳಿಸಿದ ಹಜಾರೆ, “ಕೇಜ್ರಿವಾಲ್‌ ವಿರುದ್ಧದ ಆರೋಪಗಳ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು; ಒಂದೊಮ್ಮೆ ಆತ ಭ್ರಷ್ಟನೆಂದು ಸಾಬೀತಾದರೆ ಆತನ ಪದುಚ್ಯತಿಯನ್ನು ಆಗ್ರಹಿಸಿ ನಾನು ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next