Advertisement
ರಾಗವೊಂದು ಹಾಡಾಗಬಲ್ಲದು, ಭಾವವಾಗಬಲ್ಲದು, ಸಿನೆಮಾವೊಂದರ ಗೆಲ್ಲುವಿಕೆಯಲ್ಲಿ ಬಂಡವಾಳವಾಗಿ ನಿರ್ಮಾಪಕನ ಸುಖನಿ¨ªೆಗೆ ಕಾರಣವಾಗುವಷ್ಟೆ ಯಶಸ್ವಿಯಾಗಿ ಪುಟ್ಟ ಮಗುವೊಂದರ ತೊಟ್ಟಿಲ ತೊಯ್ಯುವಿಕೆಯ ನೆಮ್ಮದಿಗೂ ಕಾರಣವಾಗಬಲ್ಲುದು, ಪ್ರೇಮಕ್ಕೆ ವ್ಯಾಖ್ಯಾನವಾಗಬಲ್ಲದು ಮತ್ತು ವಿರಹದ ಕಣ್ಣೀರಿಗೆ ಅಂತರಂಗವಾಗಬಲ್ಲುದು. ಇಂಥಾದ್ದನ್ನೆಲ್ಲ ಶಾಸ್ತ್ರೀಯ ಸಂಗೀತದ ಗೊಡವೆಗೆ ಹೋಗದವರು, “ಆಹಾ! ಎಂಥ ಒಳ್ಳೆಯ ಹಾಡು’ ಎಂದು ಉದ್ಗರಿಸಿದರೆ ಸಂಗೀತ ಬಲ್ಲವರು, “ಎಂಥ ಒಳ್ಳೆಯ ಸಂಗೀತ ಸಂಯೋಜನೆ!’ ಎಂದು ಉದ್ಗರಿಸುತ್ತಾರೆ ಮತ್ತು ಶಾಸ್ತ್ರೀಯ ಸಂಗೀತವನ್ನು ಬಲ್ಲವರು ಹಾಡಿನ ರಾಗದ ಹಿಂದೆ ಬಿದ್ದು ಆ ರಾಗದ ಸಂಯೋಜನೆಯ ಆಳವನ್ನು ಹೊಕ್ಕು ಆನಂದಿಸುತ್ತಾರೆ. ಇದೆಲ್ಲ ಅವರವರ ಬೊಗಸೆಯಲ್ಲಿ ಸಿಕ್ಕಷ್ಟು, ಸಮಾಧಾನದ ಸ್ಥಿತಿಯ ಮನಸ್ಸಿನ ಪದರಗಳ ನಡುವೆ ಹೊಕ್ಕಷ್ಟು, ನಾವು ಕೊಟ್ಟಷ್ಟು ಮತ್ತು ಪಡೆದಷ್ಟು ಸಂಗೀತವು ಸೌಖ್ಯವಾಗುತ್ತ ಹೋಗುತ್ತದೆ.
ಸಂಗೀತವನ್ನು ಚಿಕಿತ್ಸಾರೂಪದಲ್ಲಿ ಕಾಣುವ ಮತ್ತು ಅದಕ್ಕೆ ಪುರಾವೆಗಳನ್ನು ಸಮಾಧಾನದಲ್ಲಿ ಪ್ರಯೋಗಗಳನ್ನಾಗಿ ನಡೆಸುವ ಅದೆಷ್ಟೋ ಯುನಿವರ್ಸಿಟಿಯ ಶಾಖೆಗಳು ಯಶಸ್ವಿಯಾಗಿ ಪಶ್ಚಿಮದಲ್ಲಿ¨ªಾವೆ. ಮ್ಯೂಸಿಕ್ ಥೆರಪಿ ಎಂಬ ಈ ಶಾಖೆಗೆ ಸಂಗೀತದ ಹಲವಾರು ಅಂಗಗಳು ವಿಭಿನ್ನ ಸ್ತರಗಳಲ್ಲಿ ಈ ಶಾಖೆಯ ನಿರಂತರ ಉನ್ನತಿಗೆ ಕಾರಣವಾಗುತ್ತ ಬಂದಿ¨ªಾವೆ. ಆದರೆ, ನಮ್ಮ ಶಾಸ್ತ್ರೀಯ ಸಂಗೀತದ ಚಿಕಿತ್ಸಕ ಗುಣವನ್ನು ಪಶ್ಚಿಮದಲ್ಲಿ ಅಷ್ಟು ಸುಲಭವಾಗಿ ಅಪ್ಪಿಕೊಳ್ಳುವ ಕೆಲಸವು ಸಿದ್ಧಾಂತದ ಹಿನ್ನೆಲೆಯಲ್ಲಿ ನಡೆಯುವುದು ಸುಲಭವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ “ರಾಗ’ ಎಂಬ ಜಗತ್ತಿನ ಅತೀ ಸಂಕೀರ್ಣ ಸಂಗೀತ ಪ್ರಕಾರ ಮತ್ತು ರಾಗವನ್ನು ಅರಿಯುವ ಮತ್ತು ಕಲಿಯುವ ಮನಃಸ್ಥಿತಿಗೆ ಅನಿವಾರ್ಯವಾಗಿ ಬೇಕಾದ ಪರಮಸಾವಧಾನ. ರಾಗವೊಂದನ್ನು ಕಲಿಯುವ ಪ್ರಕ್ರಿಯೆಗೆ ಮುಖ್ಯವಾಗಿ ಎರಡು ವಿಧವಿರುತ್ತದೆ. ಒಂದು, ರಾಗವನ್ನು ಗುರುತಿಸಲು ಬೇಕಾದ ಶಾಸ್ತ್ರದ ಹಿನ್ನೆಲೆ. ಉತ್ತಮ ಕೇಳುಗನಾಗಲೋ ಅಥವಾ ರಾಗವೊಂದರ ಬೇರೆ ಬೇರೆ ಪ್ರಭಾವಗಳನ್ನು ಅರಿಯಲು ಬೇಕಾದ ಶಾಸ್ತ್ರದ ಹಿನ್ನೆಲೆಯನ್ನು ಗ್ರಹಿಸುವ ಸ್ಥಿತಿ. ಸಾಮಾನ್ಯ ಕೇಳುಗನಿಗೆ ಮತ್ತು ಶಾಸ್ತ್ರೀಯ ಸಂಗೀತವನ್ನು ತನ್ನದೇ ಆದ ಕಾರಣವೊಂದಕ್ಕಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸುವ ಮನಃಸ್ಥಿತಿಗೆ ಇದು ಸಾಕು. ಆದರೆ, ಶಾಸ್ತ್ರೀಯ ಸಂಗೀತವನ್ನು ಕಲಾವಿದನಾಗಲು ಅಭ್ಯಾಸ ಮಾಡುವ ವಿದ್ಯಾರ್ಥಿಗೆ ಬೇಕಾಗುವ ಪಾಠವೇ ಬೇರೆ. ಅದು ಕೇವಲ ಗುರುವನ್ನರಸಿ ಸಂಗೀತದ ಧ್ಯಾನ ಮತ್ತು ಗುರುಧ್ಯಾನದಲ್ಲಿ ಐಕ್ಯವನ್ನು ಕಾಣುವ ಮನೋಭಾವ.
Related Articles
Advertisement
ರಾಗವನ್ನು ಮನುಷ್ಯನ ಮನೋದೈಹಿಕ ವ್ಯಾಧಿಗಳಿಗೆ ಚಿಕಿತ್ಸಾರೂಪದಲ್ಲಿ ಬಳಸಬಹುದು ಎಂಬ ವಿಷಯವನ್ನು ಮೊದಲ ಬಾರಿಗೆ ತಿಳಿದ, ಸಂಗೀತವನ್ನು ಸ್ವಲ್ಪ ಬಲ್ಲ ಎಲ್ಲರಲ್ಲಿಯೂ ಇಂಥ ಪ್ರಶ್ನೆಗಳು ಹುಟ್ಟುತ್ತವೆ. ಸುಲಭಕ್ಕೆ ಅರ್ಥ ಮಾಡಿಕೊಳ್ಳಬೇಕೆಂದರೆ, ನೂರು ಜನಕ್ಕೆ ಮಂತ್ರವೊಂದರ ಉಪದೇಶವಾದರೆ, ಅವರೆಲ್ಲರೂ ಅದೇ ಮಂತ್ರವನ್ನು ಜಪಿಸುತ್ತಾರೆ. ಎಲ್ಲರ ಉಚ್ಚಾರದ ಮಂತ್ರದಲ್ಲಿ ಅದೇ ಅಕ್ಷರಗಳು. ಆದರೆ, ಆ ಮಂತ್ರದ ಸಿದ್ಧಿಯು ಅದೆಷ್ಟು ಜನಕ್ಕೆ ಆಗುತ್ತದೆ ಎಂಬುದು ಆತ್ಯಂತಿಕವಾದ ಉತ್ತರ. ಪ್ರೇಮ ಎಂಬ ಅತ್ಯಂತ ಸರಳವಾಗಬಹುದಾದ ವಿಷಯದ ಮೇಲೆ ಇದುವರೆಗೆ ಜಗತ್ತಿನಲ್ಲಿ ಲಕ್ಷಾಂತರ ಕವಿಗಳು ಪದ್ಯ ಬರೆದಿ¨ªಾರೆ ಮತ್ತು ಪ್ರೇಮವೆಂಬ ವಿಷಯವು ಸಂಕೀರ್ಣವಾಗುತ್ತ ಹೋಗಿದೆ.
“ನಾನು ನಿನ್ನನ್ನೆಷ್ಟು ಪ್ರೀತಿಸ್ತೇನೆ’ ಎಂದು ಹೇಳುವುದು ಹೇಗೆ? “ನೀನಿಲ್ಲದೆ ನನಗೆ ಬದುಕಿಲ್ಲ’ ಇದು ಆನಂದ್ ಭಕ್ಷಿಯವರು ಬರೆದ ಹಮೆ ತುಮ್ ಸೆ ಪ್ಯಾರ್ ಕಿತನಾ ಎಂಬ ಹಾಡಿನ ಅತೀ ಸಾಮಾನ್ಯ ಅರ್ಥ. ಒಂದು ರಾಗದ ಆನಂದವೂ ಅದೇ ಪ್ರಕಾರದ ತೀವ್ರತೆಯನ್ನು ಬಯಸುತ್ತದೆ. ಕಲಾವಿದ ಆ ರಾಗವನ್ನು ಹಾಡುವಾಗ ಅಥವಾ ನುಡಿಸುವಾಗ ಆ ರಾಗವನ್ನು ಅದೆಷ್ಟು ಅಪ್ಪಿರುತ್ತಾನೆ ಮತ್ತು ನಂಬಿರುತ್ತಾನೆಂದರೆ ಆ ಹಂತದಲ್ಲಿ ರಾಗವು ಕಲಾವಿದನಲ್ಲಿ ಹೊಮ್ಮುತ್ತಿದೆಯೋ ಅಥವಾ ಕಲಾವಿದ ರಾಗವಾಗುತ್ತಿ¨ªಾನೋ ಎಂದು ಹೇಳುವುದು ಕಷ್ಟವಾಗುತ್ತದೆ.
ಹಾಗೆಯೇ ಅಂಥ ದಿವ್ಯವಾದ ರಾಗದ ಅನುಭೂತಿಯಾದಲ್ಲಿ ಸಂಕೀರ್ಣವಾದ ಮನೋದೈಹಿಕ ವ್ಯಾಧಿಗಳೂ ಇಲ್ಲವಾಗುತ್ತವೆ. ಆದರೆ, ಇಲ್ಲಿ ಮತ್ತದೇ ಪ್ರಶ್ನೆಯೊಂದು ಬಾಧಿಸುವುದು ಸಾಮಾನ್ಯ. ರಾಗದಿಂದ ನಾವು ಏನು ಬಯಸುತ್ತೇವೆ. ರಾಗದ ಕೇಳುವಿಕೆಯನ್ನು ನಾವು ಕಾಮ್ಯಕರ್ಮವನ್ನಾಗಿಸಿಕೊಳ್ಳುವುದು ಅಥವಾ ಆತ್ಯಂತಿಕ ಆನಂದವನ್ನಾಗಿಸಿಕೊಳ್ಳುವುದು ನಮಗೆ ಬಿಟ್ಟದ್ದು.
music itself is a therapy ಓಶೋ ಆಶ್ರಮದ ಸ್ವಾಮಿಗಳೊಬ್ಬರು ಸಂದರ್ಭವೊಂದರಲ್ಲಿ ಹೀಗೆ ಹೇಳಿದ್ದರು! ಸಂಗೀತವೇ ಒಂದು ಔಷಧ! ಹಾಗಿದ್ದರೆ ನಾವು ರಾಗಗಳ ಮನೆಯನ್ನು ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳೆನ್ನಬಹುದು!
ಕಣಾದ ರಾಘವ