Advertisement

ರಸ್ತೆ ಕಾಮಗಾರಿ ಪೂರ್ಣವಾಗುವುದೆಂದು?

12:54 PM Aug 24, 2018 | |

ಬಸವಕಲ್ಯಾಣ: ಸಿಸಿರಸ್ತೆ ಮಾಡುವ ಉದ್ದೇಶದಿಂದ ಹಳೆ ಸಿಸಿ ರಸ್ತೆ ಅಗೆದು, ಎರಡು ತಿಂಗಳುಗಳಿಂದ ಹಾಗೇ ಬಿಟ್ಟಿರುವುದರಿಂದ ನಗರದ 2ನೇ ವಾರ್ಡ್‌ ವ್ಯಾಪ್ತಿಗೆ ಒಳಪಡುವ ಮಲ್ಲಿಕಾರ್ಜುನ ಕಾಲೋನಿ ನಿವಾಸಿಗಳು ನಿತ್ಯ ಯಾತನೆ ಅನುಭವಿಸುವಂತಾಗಿದೆ.

Advertisement

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ವಾಸಿಸುವ ಈ ಕಾಲೋನಿಯಲ್ಲಿ ಹೊಸದಾಗಿ ಸಿಸಿರಸ್ತೆ ನಿರ್ಮಿಸುವ ಕಾಮಗಾರಿ ಮಾಡುತ್ತಿದ್ದು, ಹಳೆ ರಸ್ತೆ ಅಗೆಯಲಾಗಿದೆ. ಎರಡು ತಿಂಗಳಿನಿಂದ ಕಾಮಗಾರಿ ಪೂರ್ಣವಾಗದೇ ನಿಂತಿದೆ.
 
ಆದರೆ ಈವರೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಕಾಲೋನಿಯ ನಿವಾಸಿಗಳು ಮತ್ತು ಮಕ್ಕಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಸಿಸಿರಸ್ತೆ ಅಗೆದು ಹಾಗೇ ಬಿಟ್ಟಿದ್ದರಿಂದ ರಸ್ತೆ ತುಂಬಾ ಬಂಡೆ ಕಲ್ಲುಗಳಂತೆ ಸಿಮೆಂಟ್‌ ಮತ್ತು ಜಲ್ಲಿ ಕಲ್ಲುಗಳು ಎದ್ದು ನಿಂತಿವೆ. ಇದರಿಂದ ನಿವಾಸಿಗಳು ರಸ್ತೆಯಲ್ಲಿ ಸಂಚರಿಸಲು ಬಾರದಂತಾಗಿದೆ. 

ರಾತ್ರಿ ಸಮಯದಲ್ಲಿ ವೃದ್ಧರು ಹಾಗೂ ಮಕ್ಕಳು ಒಬ್ಬರೇ ಹೊರಗೆ ಹೋಗದೆ, ಇನ್ನೊಬ್ಬರ ಸಹಾಯ ಪಡೆದು ಹೋಗಬೇಕಾಗಿದೆ. ಈ ರಸ್ತೆ ಸಮಸ್ಯೆಯಿಂದ ಬೈಕ್‌ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕೂಡ ನಡೆದಿವೆ. ಅಲ್ಲದೇ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗದೆ ಮನೆ ಒಳಗೆ ನುಗ್ಗುತ್ತಿವೆ. ಇದರಿಂದ ಸೊಳ್ಳೆಕಾಟ ಜಾಸ್ತಿಯಾಗಿ ನಿವಾಸಿಗಳು ರಾತ್ರಿ ನಿದ್ದೆ ಮಾಡದಂತ ಸ್ಥಿತಿ ಇದೆ.

ಮಳೆಗಾದಲ್ಲಿ ಸಾಂಕ್ರಾಮಿಕ ರೋಗಗಳು ಹರಡು ಆತಂಕದಲ್ಲಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮನಸ್ಸು ಮಾಡುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನ
ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

ಕಾಲೋನಿಯಲ್ಲಿ ಇದ್ದ ಸಿಸಿರಸ್ತೆಯನ್ನು ಮೂರು ತಿಂಗಳ ಹಿಂದೆ ಅಗೆದು ಹಾಗೇ ಬಿಡಲಾಗಿದೆ. ಆದರೆ ಈವರೆಗೂ ರಸ್ತೆ ಕಾಮಗಾರಿ ಆರಂಭ ಮಾಡಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಸಂಚಾರಕ್ಕೆ ಯಾತನೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಮಸ್ಯೆಯಿಂದ ಮುಕ್ತಗೊಳಿಸಬೇಕು.
 ಸಾಗರ ಕಿರುನಗೆ, ಬಡಾವಣೆ ನಿವಾಸಿ 

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next