Advertisement

ರಾಜಶೇಖರ ಪಾಟೀಲ ಬಿಜೆಪಿ ಸೇರುವರೆ?

01:02 PM Mar 02, 2018 | Team Udayavani |

ಹುಮನಾಬಾದ: ಶಾಸಕ ರಾಜಶೇಖರ ಪಾಟೀಲ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ದಟ್ಟವಾಗಿ ಹಬ್ಬಿದ್ದು, ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲದ ವಾತಾರ್ವಣ ನಿರ್ಮಾಗೊಂಡಿದೆ.

Advertisement

ಕಳೆದ ವಾರ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ರಾಜಶೇಖರ ಪಾಟೀಲ ಅವರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಬುಧವಾರ, ಶಂಕರ ಬಿದಿರಿ ಹಾಗೂ ಕಲಬುರಗಿ ಬಿಜೆಪಿ ಮುಖಂಡ ಶಾಸಕರ ಮನೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಶಾಸಕರು ಪಕ್ಷ ತೊರೆಯುತ್ತಾರೆಯೇ ಎಂಬ ಪ್ರಶ್ನೆ ಜನರಿಗೆ ಕಾಡತೊಡಗಿದೆ. ಅಲ್ಲದೇ ಎರಡು ಪಕ್ಷಗಳ ಮುಖಂಡರಲ್ಲೂ ಕುತೂಹಲ ಮೂಡಿಸಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬುಧವಾರ ಮಾಜಿ ಶಾಸಕ ಸುಭಾಷ ಕಲ್ಲೂರ ಅವರ ಮನೆಯಲ್ಲಿ ಬಿಜೆಪಿ ಮುಖಂಡರ ಸಭೆ ನಡೆದಿದ್ದು, ಬೇರೆ ಪಕ್ಷದವರನ್ನು ಬಿಜೆಪಿಗೆ ಸೇರ್ಪಡೆಗೊಳಿಸದಂತೆ ಚರ್ಚೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಹಬ್ಬಿರುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳಿಯ ಬಿಜೆಪಿಯವರು, ಶಾಸಕ ರಾಜಶೇಖರ ಪಾಟೀಲ ಬಿಜೆಪಿ ಸೇರಿದರೆ ಪಕ್ಷ ತೊರೆಯುವ ಕುರಿತು
ಕೂಡ ಕೆಲ ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬೇರೆ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಟಿಕೆಟ್‌ ನೀಡದಂತೆ ರಾಜ್ಯ ಬಿಜೆಪಿ ಮುಖಂಡರ ಗಮನಕ್ಕೆ ತರುವುದಾಗಿ ಬಿಜೆಪಿ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಶಾಸಕ ರಾಜಶೇಖರ ಪಾಟೀಲರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಸರ್ಕಾರದ ಮೇಲೆ ಹೆಚ್ಚು ಒತ್ತಡ ಹೇರಿ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಜನತೆ ಅವರೊಂದಿಗೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕರು ಪಕ್ಷ ತೊರೆಯುವ ಮಾತೆ ಇಲ್ಲ ಎನ್ನುತ್ತಾರೆ. 

ದಿ| ಬಸವರಾಜ ಪಾಟೀಲ ಅವರು ಎರಡು ಬಾರಿ ರಾಜ್ಯ ಸಚಿವರಾಗಿ, 4 ಬಾರಿ ಶಾಸಕರಾಗಿ, ಮೂರು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಹುಮನಾಬಾದ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ದಿ| ಎನ್‌.ಧರ್ಮಸಿಂಗ್‌ ಅವರ ಮಧ್ಯದ ಗೊಂದಲದ ಹಿನ್ನೆಲೆಯಲ್ಲಿ ಕೊನೆ ಎಂಎಲ್‌ಸಿ ಚುನಾವಣೆಯನ್ನು ಬಿಜೆಪಿಯಿಂದಲ್ಲೆ ಸ್ಪ ರ್ಧಿಸಿ ಜಯಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವರ ಪುತ್ರ
ರಾಜಶೇಖರ ಪಾಟೀಲ ಕೂಡ ಒಂದು ಬಾರಿ ಮರು ಚುನಾವಣೆ ಗೆಲ್ಲುವ ಮೂಲಕ ಮತ್ತೆ ಎರಡು ಬಾರಿ ಶಾಸಕರಾಗಿ ಆಯ್ಕೆಗೊಂಡು ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಇವರೊಂದಿಗೆ ಭಿನ್ನಾಭಿ ಪ್ರಾಯಗಳು ಇವೆ ಎನ್ನಲಾಗಿದ್ದು, ಪಕ್ಷ ತೊರೆಯಲಿದ್ದಾರೆ ಎಂಬ ಮಾತಗಳು ಕೇಳಿಬರುತ್ತಿವೆ. ಪಾಟೀಲ ಪರಿವಾರ ಕಾಂಗ್ರೆಸ್‌ ಭದ್ರ ಬುನಾದಿ ಎಂದು ತಿಳಿದಿರುವ ಬಿಜೆಪಿ ನಾಯಕರು, ಅವರನ್ನು ಸೆಳೆದುಕೊಳ್ಳುವ ತವಕದಲ್ಲಿದ್ದಾರೆ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
 
ಕಾಂಗ್ರೆಸ್‌ ಪಕ್ಷ ನನ್ನನ್ನು ಗುರುತಿಸಿದೆ. ಕಾರಣ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಯಾವ ಬಿಜೆಪಿ ಮುಖಂಡರ ಮನೆಬಾಗಿಲಿಗೂ ಹೋಗಿ ನನ್ನನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಅಥವಾ ಟಿಕೆಟ್‌ ನಿಡುವಂತೆ ಕೇಳಿಲ್ಲ. ಆದರೆ ಬಿಜೆಪಿ ರಾಜ್ಯ ನಾಯಕರು ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆ. ಆದರೆ ನಾನು ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಬಿಜೆಪಿ ಸೇರುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಶಂಕರ ಬಿದರಿ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ನನ್ನ ಮನೆಗೆ ಬಂದಿದ್ದಾರೆ. ಅವರು ನಮ್ಮ ತಂದೆಯವರ ಹಳೆಯ ಸ್ನೇಹಿತರು. ಈ ಕಾರಣಕ್ಕೆ ಮೊದಲ ಬಾರಿಗೆ ಮನೆಗೆ ಬಂದ ಅವರನ್ನು ಸನ್ಮಾನಿಸಿದ್ದೇವೆ ಹೊರತು ಯಾವುದೇ ರಾಜಕೀಯ ಮಾತುಗಳನ್ನು ಆಡಿಲ್ಲ. ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಕೂಡ ನನ್ನಗೆ ಗೊತ್ತಿಲ್ಲ.
 ರಾಜಶೇಖರ ಪಾಟೀಲ, ಶಾಸಕ  

Advertisement

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next