Advertisement

Rahul Gandhi ಆಕಸ್ಮಿಕವಾಗಿ ಸಿಕ್ಕಿದರೆ ಓಡಿಹೋಗಲು ಆಗುತ್ತದೆಯೇ: ಪರಂ

12:37 AM Sep 12, 2024 | Shreeram Nayak |

ಬೆಂಗಳೂರು: ಅಮೆರಿಕದಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಭೇಟಿಯಾಗಿದ್ದಾರೆ, ಹೀಗೆ ಆಕಸ್ಮಿಕವಾಗಿ ಸಿಕ್ಕಿದರು ಅಂತ ಓಡಿ ಹೋಗಲು ಆಗುತ್ತದೆಯೇ? ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್‌ ಪ್ರಶ್ನಿಸಿದರು.

Advertisement

ಅಮೆರಿಕದಲ್ಲಿ ರಾಹುಲ್‌ ಮತ್ತು ಡಿಕೆಶಿ ಭೇಟಿಯಾದ ಬಗ್ಗೆ ವಿಚಾರದ ಬಗ್ಗೆ ಬುಧವಾರ ಸುದ್ದಿಗಾರರು ಕೇಳಿದಾಗ, “ನಾನೂ ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ನನಗೂ ನೋಡಿ ಸಂತೋಷವಾಯಿತು. ಡಿಕೆಶಿ ಕುಟುಂಬ ಸಮೇತ ಹೋಗಿದ್ದಾರೆ. ಒಂದೇ ಹೊಟೇಲ್‌ನಲ್ಲಿ ಸಿಕ್ಕಿದ್ದಾರೆ. ಹೀಗೆ ಆಕಸ್ಮಿಕವಾಗಿ ಸಿಕ್ಕಿದಾಗ ಓಡಿ ಹೋಗಲು ಆಗುತ್ತಾ? ಮುಖಾಮುಖಿಯಾದ ಪರಸ್ಪರ ಮಾತನಾಡಿದ್ದಾರಷ್ಟೇ’ ಎಂದರು.

ರಾಜಕಾರಣದ ಬಗ್ಗೆ ಚರ್ಚಿಸಿಲ್ಲ: ಸಚಿವ ಲಾಡ್‌
ಡಿ.ಕೆ. ಶಿವಕುಮಾರ್‌ ನಮ್ಮ ನಾಯಕರು. ಅಮೆರಿಕದಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದರಲ್ಲಿ ಕುತೂಹಲ ಏನೂ ಇಲ್ಲ. ಅವರಿಬ್ಬರು ಅಲ್ಲಿ ರಾಜ್ಯ ರಾಜಕಾರಣ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆಗಾಗಿ ಸಮನ್ವಯ ಸಮಿತಿ ರಚಿಸಿದ್ದು, ನನ್ನನ್ನೂ ಸದಸ್ಯನನ್ನಾಗಿಸಿದ್ದಾರೆ. 2 ತಿಂಗಳಲ್ಲಿ ಹಗರಣಗಳ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ ಎಂದು ತಿಳಿಸಿದರು.

ಸಿಎಂ ಬದಲಾವಣೆ ಹೇಳಿಕೆ ಬಗ್ಗೆ ಡಿಕೆಶಿ 
ಕ್ರಮ ಕೈಗೊಳ್ಳುತ್ತಾರೆ: ಪರಮೇಶ್ವರ್‌
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ ಅನಗತ್ಯ ಎನ್ನುವುದು ನನ್ನ ವೈಯಕ್ತಿಕ ಭಾವನೆ. ಹೇಳಿಕೆ ಕೊಟ್ಟವರ ಬಗ್ಗೆ ಅಧ್ಯಕ್ಷರು ಗಮನಹರಿಸಲಿದ್ದಾರೆ. ಅಧ್ಯಕ್ಷರು ಅಮೆರಿಕದಿಂದ ಬರಲಿ. ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.

Advertisement

ಸಿಎಂ ಸ್ಥಾನದ ಬಗ್ಗೆ ಅನಗತ್ಯ ಚರ್ಚೆಯಾಗುತ್ತಿದೆ. ಆಡಳಿತ ಮಾಡಬೇಕು, ಕೊಟ್ಟ ಭರವಸೆ ಈಡೇರಿಸಬೇಕು. ಇದು ನಮ್ಮ ಆದ್ಯತೆ. ಈ ಮಧ್ಯೆ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ, ಗ್ಯಾರಂಟಿ ಅನುಷ್ಠಾನ ಬೇಡ ಅಂತ ಮಾಡುತ್ತಿದ್ದಾರೆ. ಇದನ್ನು ಬದಿಗೊತ್ತಿ ನಾವು ಕೆಲಸ ಮಾಡಬೇಕಿದೆ ಎಂದರು.

ಮುಂದಿನ ಸಿಎಂ ಪರಂ!
ಪರಮೇಶ್ವರ್‌ ಮುಂದಿನ ಸಿಎಂ ಅಂತ ಬೆಂಬಲಿಗರು ಘೋಷಣೆ ಕೂಗಿದ ಪ್ರಸಂಗ ಸದಾಶಿವನಗರದಲ್ಲಿರುವ ಗೃಹಸಚಿವರ ನಿವಾಸದ ಬಳಿ ನಡೆಯಿತು. ಆಗ ಪರಮೇಶ್ವರ “ಸುಮ್ಮನೆ ಇರ್ರೀ’ ಎಂದು ಗದರಿದರು.

Advertisement

Udayavani is now on Telegram. Click here to join our channel and stay updated with the latest news.

Next