Advertisement
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ವ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಅದರ ರೂಪರೇಷೆ ತಯಾರಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
Related Articles
Advertisement
ಬೆಳಗಾವಿಯಲ್ಲಿ ಆರಂಭವಾಗಿರುವ ಖಾಸಗಿ ಮಾರುಕಟ್ಟೆಯಿಂದ ರೈತರಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ ಖಾಸಗಿ ಮಾರುಕಟ್ಟೆ ಪರ ಸರ್ಕಾರ ನಿಂತಿದೆ. ಅದನ್ನು ಸರ್ಕಾರವೇ ತಡೆಗಟ್ಟಬೇಕು ಎಂದರು.
ಮೇಯರ್ ಆಯ್ಕೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಪಾಲಿಕೆಯಲ್ಲಿ ಈಗಾಗಲೇ ಅನಧಿಕೃತ ಮೇಯರ್, ಉಪ ಮೇಯರ್ ಇದ್ದಾರೆ, ಮೇಯರ್ ಆಗಿ ಶಾಸಕರಾದ ಅಭಯ ಪಾಟೀಲ್, ಉಪ ಮೇಯರ್ ಅನಿಲ ಬೆನಕೆ ಅವರ ಕೈಯಲ್ಲಿ ಆಡಳಿತವಿದೆ ಎಂದು ಟೀಕಿಸಿ ಉಳಿದ ಸದಸ್ಯರು ಟೀ, ಬಿಸ್ಕೇಟ್ ಗೆ ಸೀಮಿತವಾಗಲಿದ್ದಾರೆ ಎಂದು ಲೇವಡಿ ಮಾಡಿದರು.